ಕಾಸರಗೋಡು: ನವಕೇರಳ ಸಭೆಯಂಗವಾಗಿ ಜಿಲ್ಲೆಯಲ್ಲಿ ಲಭಿಸಿದ ೧೪೬೦೦ ದೂರುಗಳನ್ನು ಸ್ಕ್ಯಾನ್ ಮಾಡಿ ವಿವಿಧ ಇಲಾಖೆಗಳಿಗೆ ನೀಡಲಾಗಿದೆ ಎಂದೂ ಇಲಾಖೆ ಅಧಿಕಾರಿಗಳು ಅದರಲ್ಲಿ ಶೀಘ್ರವೇ ತೀರ್ಪು ಕಲ್ಪಿಸಬೇಕೆಂದು ಜಿಲ್ಲಾಧಿಕಾರಿ ಕೆ. ಇಂಬಶೇಖರ್ ತಿಳಿಸಿದ್ದಾರೆ. ಅರ್ಜಿದಾರನಿಗೆ ಪಾಸಿಟಿವ್ ಉತ್ತರಗಳನ್ನು ನೀಡಬೇಕೆಂದೂ ಸೂಕ್ತವಾದ ವಿವರಣೆಗಳೊಂದಿಗೆ ಉತ್ತರ ನೀಡಬೇಕೆಂದೂ ಅವರು ಸೂಚಿಸಿದ್ದಾರೆ. ಪ್ರತಿ ಇಲಾಖೆಗಳು ನೀಡುವ ಉತ್ತರಗಳು ಸಹಿತದ ಚಟುವಟಿಕೆ ಕ್ರಮಗಳನ್ನು ಮೋನಿಟರಿಂಗ್ ಮಾಡಲಾಗು ತ್ತಿದೆ ಎಂದೂ ಲೋಪದೋಷ ಕಂಡು ಬಂದರೆ ಕೂಡಲೇ ಮಧ್ಯೆ ಪ್ರವೇಶಿಸು ವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
