ನವೀನ್ಬಾಬು ಸಾವು ಸಿಬಿಐ ತನಿಖೆ ಇಲ್ಲ
ಕೊಚ್ಚಿ: ಕಣ್ಣೂರು ಎಡಿಎಂ ಆಗಿದ್ದ ನವೀನ್ ಬಾಬು ಅವರು ಸಾವಿಗೀಡಾದ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿ ನವೀನ್ಬಾಬುರ ಪತ್ನಿ ಮಂಜುಷಾ ನೀಡಿದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಇದೇ ವೇಳೆ ಪ್ರತ್ಯೇಕ ತನಿಖಾ ತಂಡ ತನಿಖೆ ಮುಂದುವರಿಸಬಹುದೆಂದು ಹೈಕೋರ್ಟ್ ತಿಳಿಸಿದೆ. ಕೊಲೆ ಕೃತ್ಯ ಸಾಧ್ಯತೆ ಬಗ್ಗೆ ಸಾಬೀತುಪಡಿಸುವ ಪುರಾವೆಗಳನ್ನು ಹಾಜರುಪಡಿಸಲು ಅರ್ಜಿದಾರರಿಗೆ ಸಾಧ್ಯವಾಗಿಲ್ಲವೆಂದು ನ್ಯಾಯಾಲಯ ತಿಳಿಸಿದೆ. ಇದೇ ವೇಳೆ ತೀರ್ಪಿನ ವಿರುದ್ಧ ಅಪೀಲು ಸಲ್ಲಿಸುವುದಾಗಿ ನವೀನ್ಬಾಬುರ ಪತ್ನಿ ಮಂಜುಷಾ ತಿಳಿಸಿದ್ದಾರೆ.