ನಷ್ಟದತ್ತ ಸಾಗುತ್ತಿರುವ ಕಾಳುಮೆಣಸು ಕೃಷಿ: ಕೃಷಿಕರು ಕಂಗಾಲು

ಕಾಸರಗೋಡು: ಕಾಳುಮೆಣಸು ಕೃಷಿ ಈ ಬಾರಿಯೂ ಕೃಷಿಕರಲ್ಲಿ ನಿರಾಸೆ ಮೂಡಿಸಿರುವುದಾಗಿ ಅಭಿಪ್ರಾಯ ಕೇಳಿಬರುತ್ತಿದೆ. ಕಾಳುಮೆಣಸು ಕೊಯ್ಯುವ ಸಮಯ ಇದಾಗಿದೆ. ಈ ಬಾರಿ ಉತ್ಪಾದನೆ ಸುಮಾರು 30 ಶೇಕಡಾಕ್ಕಿಂತ ಕಡಿಮೆ ಯಾಗಿದೆ.  ಒಂದು ಬಳ್ಳಿಯಿಂದ  ಲಭಿಸಿದ ಕಾಳು ಮೆಣಸು ಈ ಹಿಂದಿನ ವರ್ಷ ಒಂದೂವರೆ ಕಿಲೋದಷ್ಟು  ಲಭಿಸುತ್ತಿತ್ತು. ಆದರೆ  ಈ ಬಾರಿ ಅದು ಒಂದು ಕಿಲೋ ಕೂಡಾ ಲಭಿಸುವುದು ಸಂಶಯ ಎನ್ನಲಾಗುತ್ತಿದೆ. ಕೃಷಿಗೆ ಅಗತ್ಯವುಳ್ಳ ಸಮಯದಲ್ಲಿ ಮಳೆ ಲಭಿಸದಿರುವುದು  ತಿರುಗೇಟಾಗಿದೆ. ಕಳೆದ ಕೆಲವು ವರ್ಷಗಳಿಂದ ಕಂಡುಬರುತ್ತಿರುವ ಹವಾಮಾನ ವೈಪರೀತ್ಯವೇ ಕೃಷಿ ಕಡಿಮೆಯಾಗಲು ಕಾರಣವಾಗಿದೆ. ಒಂದೆಡೆ ಉತ್ಪಾದನೆಯಲ್ಲಿ ಕುಂಠಿತ ಮತ್ತೊಂದೆಡೆ ವೇತನ ಹೆಚ್ಚಿರುವುದು ಕೂಡಾ ಕೃಷಿಕರಿಗೆ  ತೀವ್ರ ಸಮಸ್ಯೆ ಸೃಷ್ಟಿಸಿದೆ. 

ವೇತನ ಹೆಚ್ಚಿದರೂ ಕೆಲವೆಡೆ ಕಾಳುಮೆಣಸು ಕೊಯ್ಯಲು  ನೌಕ ರರು ಲಭಿಸದ ಸ್ಥಿತಿ ಉಂಟಾಗಿದೆ. ಇದರಿಂದ ಕಟಾವು ಕೆಲಸವನ್ನು ಗುತ್ತಿಗೆ ಯಾಗಿ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ಲಭಿಸಿದ  ಬೆಳೆಯಲ್ಲಿ ಅರ್ಧ ಮಾತ್ರವೇ ಕೃಷಿಕರಿಗೆ  ಲಭಿಸುತ್ತಿದೆ. ಕಾಡು ಹಂದಿಗಳ ಉಪಟಳ ಕೂಡಾ ಕೃಷಿಗೆ ತೀವ್ರ ಹೊಡೆತ ಸೃಷ್ಟಿಸಿದೆ. ಕಂಗು, ತೆಂಗು ಮರಗಳ ಬುಡವನ್ನು ಹಂದಿಗಳು ಹಾನಿಗೊಳಿ ಸುವುದರಿಂದ ಅವುಗಳ ಬುಡ ದಲ್ಲಿರುವ ಕಾಳುಮೆಣಸು ಬಳ್ಳಿಗಳು ಕೂಡಾ  ನಾಶಗೊಳ್ಳುತ್ತಿವೆ. ಕಾಳು ಮೆಣಸು ದರ ಪ್ರತಿವರ್ಷ ಅಲ್ಪ ಹೆಚ್ಚುತ್ತಿದೆ ಎಂಬುವುದು ಮಾತ್ರವೇ ಕೃಷಿಕರಿಗೆ ನೆಮ್ಮದಿಯ ಸಂಗತಿಯಾಗಿದೆ.

You cannot copy contents of this page