ನಾಡಿನಾದ್ಯಂತ ಗಣೇಶೋತ್ಸವಕ್ಕೆ ಸಂಭ್ರಮದ ಚಾಲನೆ
ಕಾಸರಗೋಡು: ಶ್ರೀ ಗಣೇಶ ಚತುರ್ಥಿ ಹಬ್ಬವನ್ನು ಇಂದಿನಿಂದ ನಾಡಿನಾದ್ಯಂತ ಭಕ್ತಿ, ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ. ವಿವಿಧ ಗಣೇಶೋತ್ಸವ ಸಮಿತಿಗಳ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಭಾರೀ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುತ್ತಿದ್ದಾರೆ.
ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರ ಸಹಿತ ವಿವಿಧ ಕ್ಷೇತ್ರಗಳಿಗೆ ಇಂದು ಬೆಳಿಗ್ಗಿನಿಂದಲೇ ಭಕ್ತರು ಭಾರೀ ಸಂಖ್ಯೆಯಲ್ಲಿ ತಲುಪಿ ಶ್ರೀ ದೇವರ ದರ್ಶನ ಪಡೆಯುತ್ತಿದ್ದಾರೆ. ಕಾಸರಗೋಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರ, ಹೊಸಂಗಡಿ, ಮುಳ್ಳೇರಿಯ, ಬದಿಯಡ್ಕ, ಪೆರ್ಲ, ಬೆಳ್ಳೂರು, ಉಪ್ಪಳ, ನೀರ್ಚಾಲು, ಮುಳಿಂಜ, ದೈಗೋಳಿ, ವರ್ಕಾಡಿ ಸಹಿತ ನಾಡಿನಾದ್ಯಂತ ಇಂದು ಗಣೋತ್ಸವ ಆಚರಿಸಲಾಗುತ್ತಿದೆ.
ಕಾಸರಗೋಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ಇಂದಿ ನಿಂದ 11ರ ವರೆಗೆ ವಿವಿಧ ಧಾ ರ್ಮಿಕ, ಸಾಂಸ್ಕೃತಿಕ ಕಾರ್ಯಕ್ರ ಮಗಳು ನಡೆಯಲಿದೆ. ಇಲ್ಲಿ ಪೂಜಿ ಸಲಾಗುವ ಗಣಪತಿ ವಿಗ್ರಹವನ್ನು ಇಂದು ಬೆಳಿಗ್ಗೆ ಕೇಳುಗುಡ್ಡೆ ಭಗವಾನ್ ಶ್ರೀ ಸತ್ಯಸಾಯಿ ಅಭಯ ನಿಕೇತನದಿಂದ ವಾದ್ಯ ಘೋಷಗ ಳೊಂದಿಗೆ ತಂದು ಪ್ರತಿಷ್ಠಾಪಿಸಲಾಯಿತು.