ಕುಂಬಳೆ: ರಾಷ್ಟ್ರೀಯಹೆದ್ದಾರಿ ಸಾರಿಗೆ ವಲಯದಲ್ಲಿ ವಿಸ್ಮಯ ಮೂಡಿಸುತ್ತಿರುವುದು, ರಾಷ್ಟ್ರೀಯ ಹೆದ್ದಾರಿ ಬದಿ, ಪ್ರಧಾನ ಜಂಕ್ಷನ್‌ಗಳು ಸುಂದರವಾಗುತ್ತಿರುವುದನ್ನು ಕುಂಬಳೆ ಗ್ರಾಮ ಪಂಚಾಯತ್‌ಗೆ ಇನ್ನೂ ತಿಳಿದಿಲ್ಲವೆಂದು ನಾಗರಿಕರು ಹೇಳುತ್ತಿದ್ದಾರೆ. ಕುಂಬಳೆಯಲ್ಲಿ ಸಾರ್ವಜನಿಕ ಶೌಚಾಲಯ, ಶಾಪಿಂಗ್ ಕಾಂಪ್ಲೆಕ್ಸ್, ಬಸ್ ನಿಲ್ದಾಣ ನಿರ್ಮಿಸುವುದಾಗಿಯೂ, ನಗರದ ಹೃದಯ ಭಾಗದಲ್ಲಿ ಸ್ವಾಗತ ಕಮಾನು ನಿರ್ಮಿಸಿ, ಪ್ರಯಾಣಿಕರಿಗೆ ಸ್ವಾಗತ ನೀಡುವುದಾಗಿ ಘೋಷಿಸಿದರೆ ಮಾತ್ರ ಆಡಳಿತ ಉತ್ತಮವಾಗಲಿದೆಯೆಂದು ಅಧಿಕಾರಿಗಳು ಭಾವಿಸಿದಂತಿದೆಯೆಂದು ನಾಗರಿಕರು ಅಭಿಪ್ರಾಯಪಡುತ್ತಿದ್ದಾರೆ. ಮೇಲೆ ತಿಳಿಸಿದ ಯಾವುದಾದರಲ್ಲೂ ಜನರು ತೃಪ್ತರಾಗದೇ ಹೋದಾಗ ರಾಜ್ಯ ಸರಕಾರ ಕುಂಬಳೆಯ ಅಭಿವೃದ್ಧಿಗೆ ಅಡ್ಡಿಯಾಗಿ ನಿಲ್ಲುತ್ತಿದೆಯೆಂದು ತಿಳಿಸಿದ್ದಾರೆ. ಇಲ್ಲಿನ ಆಡಳಿತ ಪಕ್ಷಕ್ಕೆ ತೃಪ್ತಿಯಾಗುವುದಾಗಿ ಅಧಿಕಾರಿಗಳು ಭಾವಿಸಿದ್ದಾರೆಂದೂ ಜನರು ಅಪಹಾಸ್ಯಗೈಯ್ಯುತ್ತಿದ್ದಾರೆ.
ಕಾಸರಗೋಡು ಹಾಗೂ ರಾಜ್ಯದ ಗಡಿ ಪ್ರದೇಶವಾದ ತಲಪಾಡಿ ಮಧ್ಯೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಪ್ರಧಾನ ಪೇಟೆ ಹಾಗೂ ಉದ್ಯಮ ಕೇಂದ್ರವಾದ ಕುಂಬಳೆ ಪೇಟೆಗೆ ರಾಷ್ಟ್ರೀಯ ಹೆದ್ದಾರಿಗೆ ಸೇರುವ ಪೇಟೆಯ ಹೃದಯ ಭಾಗ ಇದೀಗ ಕಾಡು ತುಂಬಿಕೊಂಡಿದೆ. ದೂರದ ಊರುಗಳಿಂದ ಬರುವವರಿಗೆ ತಿಳಿಯಲೆಂದು ಇಲ್ಲಿ ಕುಂಬಳೆ ಜಂಕ್ಷನ್ ಎಂಬ ಫಲಕವನ್ನು ಲೋಕೋಪ ಯೋಗಿ ಅಧಿಕಾರಿಗಳು ಸ್ಥಾಪಿಸಿದ್ದಾರೆ. ಆ ಫಲಕ ಕುಂಬಳೆ ಪೇಟೆ ಹಾಗೂ ಮುಳ್ಳೇರಿಯಕ್ಕೆ ತೆರಳುವವರಿಗೆ ಮಾರ್ಗದರ್ಶಿಯಾಗಿದೆ.
ಹತ್ತು ಅಡಿಗಳಷ್ಟು ಎತ್ತರದಲ್ಲಿ ಸ್ಥಾಪಿಸಿರುವ ಈ ಫಲಕದ ಸಮೀಪವರೆಗೆ ಕಾಡು ತುಂಬಿಕೊಂಡಿದ್ದು, ಇನ್ನು ಹತ್ತು ದಿನ ಕಳೆದರೆ ಫಲಕವೇ ಅಗೋಚರವಾ ಗಲಿದೆ ಎಂಬುವುದು ಖಚಿತ. ಈ ಕಾಡಿನೊಳಗೆ ನಗರದ ತ್ಯಾಜ್ಯಗಳನ್ನು ಗೋಣಿಚೀಲಗಳಲ್ಲಿ ತುಂಬಿಸಿ ತಂದು ಎಸೆಯುತ್ತಿರುವು ದಾಗಿಯೂ, ಅದಕ್ಕಾಗಿಯೇ ಈ ರೀತಿ ಕಾಡು ಬೆಳೆಸಲಾಗಿದೆಯೆಂದೂ ಆರೋಪ ಕೇಳಿ ಬರುತ್ತಿದೆ.
ಪೇಟೆಯ ಬದಿಯಡ್ಕ, ಪೆರ್ಲ, ಮುಳ್ಳೇರಿಯ ಬಸ್ ನಿಲುಗಡೆ ಸ್ಥಳದಲ್ಲಿ ತ್ಯಾಜ್ಯ ಎಸೆಯಲಾಗಿದೆ ಎಂದೂ ದೂರಲಾಗಿದೆ. ತ್ಯಾಜ್ಯ ಈ ಹಿಂದೆ ದೊಡ್ಡದಾದ ಹೈಮಾಸ್ಟ್ ಲೈಟ್ ಪಂಚಾಯತ್ ಸ್ಥಾಪಿಸಿತ್ತು. ಇದು ತ್ಯಾಜ್ಯ ಎಸೆಯುವವರಿಗೆ ತೊಂದರೆಯಾಗುತ್ತಿ ದೆಯೆಂದು ತಿಳಿದು ಹೆದ್ದಾರಿ ಅಭಿವೃದ್ಧಿ ನಡೆಯುತ್ತಿದೆ ಎಂಬ ನೆಪ ಹೇಳಿ ಹೈಮಾಸ್ಟ್ ಲೈಟ್ ತೆರವುಗೊಳಿಸಿರುವು ದಾಗಿ ನಾಗರಿಕರು ಹಾಗೂ ವ್ಯಾಪಾರಿಗಳು ಹೇಳುತ್ತಿದ್ದಾರೆ. ನಗರದ ಅಭಿವೃದ್ಧಿ, ನಗರದ ಶುಚೀಕರಣ, ವಾತಾವರಣದ ಶುಚೀಕರಣ, ಅಥವಾ ಮೂಲಭೂತ ಅಭಿವೃದ್ಧಿಯ ಕುರಿತು ಪಂಚಾಯತ್‌ನ ಯಾವುದೇ ಆಸಕ್ತಿಯಿಲ್ಲವೆಂದು ಜನರು ಆರೋಪಿಸುತ್ತಿದ್ದಾರೆ. ಗಮನವೆಲ್ಲಾ ಟೆಂಡರ್ ಕರೆಯುವುದು, ಗುತ್ತಿಗೆ ಖಚಿತಪಡಿಸುವುದರ ಮೇಲೆಯೇ ಅಡಗಿದೆಯೆಂದು ನಾಗರಿಕರು ತಿಳಿಸುತ್ತಿದ್ದಾರೆ.
 
								 
															






