ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳ ಮೃತದೇಹ ನದಿಯಲ್ಲಿ ಪತ್ತೆ

ಮಂಗಳೂರು: ನಿನ್ನೆ ನಾಪತ್ತೆಯಾಗಿದ್ದ ನಾಲ್ವರು ಶಾಲಾ ವಿದ್ಯಾರ್ಥಿಗಳ ಮೃತದೇಹ ನದಿಯಲ್ಲಿ ಪತ್ತೆಯಾದ ಘಟನೆ ಸುರತ್ಕಲ್‌ನಲ್ಲಿ ನಡೆದಿದೆ. ಹಳೆಯಂಗಡಿ ರೈಲ್ವೇ ಸೇತುವೆ ಬಳಿ ಮೃತದೇಹಗಳು ಪತ್ತೆಯಾಗಿದೆ. ಸುರತ್ಕಲ್‌ನ ಖಾಸಗಿ ಶಾಲೆಯೊಂದರ ೧೦ನೇ ತರಗತಿ ವಿದ್ಯಾರ್ಥಿಗಳಾದ ಯಶ್ವಿತ್ ಚಂದ್ರಕಾಂತ್, ರಾಘವೇಂದ್ರ, ನಿರೂಪ, ಅನ್ವಿತ್‌ರ ಮೃತದೇಹಗಳು ಇಂದು ಪತ್ತೆಯಾಗಿದೆ.

ನಿನ್ನೆ ವಿದ್ಯಾರ್ಥಿಗಳು ಮಾದರಿ ಪರೀಕ್ಷೆ ಬರೆದು ಶಾಲೆಯಿಂದ ಮನೆಗೆ ಹಿಂತಿರುಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮನೆ ಮಂದಿ ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದರು. ಹುಡುಕಾಟ ನಡೆಸುತ್ತಿದ್ದ ಮಧ್ಯೆ ಹಳೆಯಂಗಡಿ ನದಿ ಬಳಿ ಬ್ಯಾಗ್, ಸಮವಸ್ತ್ರ, ಚಪ್ಪಲಿ ಪತ್ತೆಯಾಗಿದೆ. ಬಳಿಕ ನದಿಯಲ್ಲಿ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ.  ನದಿಯಲ್ಲಿ ಈಜಲು ತೆರಳಿದ್ದಾಗ ದುರಂತ ಸಂಭವಿಸಿರಬಹು ದೆಂದು  ಶಂಕಿಸಲಾಗಿದೆ. ಮೃತದೇಹಗಳನ್ನು ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

You cannot copy contents of this page