ನಾಪತ್ತೆಯಾಗಿದ್ದ ಪತ್ರಕರ್ತ ನ್ಯಾಯಾಲಯದಲ್ಲಿ ಶರಣು: ಸಂಬಂಧಿಕರ ವಿರುದ್ಧ ನ್ಯಾಯಾಲಯ ನಿರ್ದೇಶದಂತೆ ಕೇಸು ದಾಖಲು

ಉಪ್ಪಳ: ನಿಗೂಢ ಸ್ಥಿತಿಯಲ್ಲಿ ನಾಪತ್ತೆಯಾಗಿದ್ದ ಪ್ರಾದೇಶಿಕ ಪತ್ರಕರ್ತ ನ್ಯಾಯಾಲಯದಲ್ಲಿ ಹಾಜರಾಗಿದ್ದಾರೆ. ಇದೇ ವೇಳೆ ಸಹೋದರನ ಬೆದರಿಕೆ ಯಿದೆಯೆಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ  ನ್ಯಾಯಾಲಯದ ನಿರ್ದೇಶ ಪ್ರಕಾರ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.

ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಧರ್ಮತ್ತಡ್ಕದ ಜೋನ್ ಡಿ’ಸೋಜ (೬೦) ನಿನ್ನೆ ಕಾಸರಗೋಡು ಪ್ರಥಮದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ  ಹಾಜರಾಗಿದ್ದಾರೆ. ಸೊತ್ತು ತರ್ಕದ ಹಿನ್ನೆಲೆಯಲ್ಲಿ ಸಹೋದರ ಜೋರ್ಜ್ ಹಾಗೂ ಚಿಕ್ಕಪ್ಪನ ಮಗ ಥೋಮಸ್ ಎಂಬಿವರಿಂದ ತನಗೆ ಬೆದರಿಕೆಯಿರುವು ದಾಗಿಯೂ ಇದ ರಿಂದ ಭಯ ಗೊಂಡು ತಾನು ನಾಪತ್ತೆ ಯಾಗಿರುವುದಾಗಿ ಜೋನ್ ಡಿ’ಸೋಜಾ ನ್ಯಾಯಾಲಯದಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಬ್ಬರ ವಿರುದ್ಧ ನ್ಯಾಯಾಲಯದ ನಿರ್ದೇಶದಂತೆ  ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಬೆಳಿಗ್ಗೆ ನ್ಯಾಯಾಲಯದಲ್ಲಿ ಹಾಜರಾದ ಜೋನ್ ಡಿ’ಸೋಜಾ ರನ್ನು ಬಳಿಕ ಮನೆಯವ ರೊಂದಿಗೆ ಕಳುಹಿಸಿಕೊಡಲಾಯಿತು.

You cannot copy contents of this page