ನಾಪತ್ತೆಯಾಗಿದ್ದ ಯುವತಿ ಪತ್ತೆ

ಕಾಸರಗೋಡು: ನಗರದ ತಳಂಗರೆ ಬಾಂಗೋಡಿನಿಂದ ಮೊನ್ನೆ ನಾಪತ್ತೆಯಾಗಿದ್ದ, ಮೂಲತಃ ತಮಿಳುನಾಡು ನಿವಾಸಿ ನಿರ್ಮಾಣ ಕಾರ್ಮಿಕರಾದ ಸೆಲ್ವಂ-ಜ್ಯೋತಿ ದಂಪತಿಯ ಪುತ್ರಿ ಶರಣ್ಯ (21)ಳನ್ನು ಕಾಸರಗೋಡು ಮಹಿಳಾ ಪೊಲೀಸರು ನಿನ್ನೆ ಕಾಸರಗೋಡು ರೈಲು ನಿಲ್ದಾಣದಿಂದ ಪತ್ತೆಹಚ್ಚಿದ್ದಾರೆ. ಆ ವೇಳೆ ಆಕೆಯ ಜತೆ ಯುವಕನೋರ್ವನೂ ಇದ್ದನೆನ್ನಲಾಗಿದೆ. ಪೊಲೀಸರು ಆಕೆಯ ಹೇಳಿಕೆ ದಾಖಲಿಸತೊಡಗಿದ್ದು, ಇಂದು ಆಕೆಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದೆಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page