ನಾಪತ್ತೆಯಾಗಿದ್ದ ಯುವತಿ ಪ್ರಿಯತಮನನ್ನು ಮದುವೆಯಾಗಿ ಠಾಣೆಯಲ್ಲಿ ಹಾಜರು
ಕಾಸರಗೋಡು: ನಾಪತ್ತೆಯಾ ಗಿದ್ದ ಯುವತಿ ಪ್ರಿಯತಮನನ್ನು ಮದುವೆಯಾಗಿ ಪೊಲೀಸ್ ಠಾಣೆಯಲ್ಲಿ ಹಾಜರಾಗಿದ್ದಾಳೆ.
ಪಟ್ಲ ಕುದ್ರೆಪ್ಪಾಡಿಯ ರುಶಾಲಿ (18) ಎಂಬಾಕೆ ಠಾಣೆಯಲ್ಲಿ ಹಾಜರಾದ ಯುವತಿಯೆಂದು ವಿದ್ಯಾನಗರ ಪೊಲೀಸರು ತಿಳಿಸಿದ್ದಾರೆ. ನ್ಯಾಯಾಲಯದಲ್ಲಿ ಹಾಜರುಪಡಿಸಿದ ಯುವತಿಯನ್ನು ಸ್ವ-ಇಚ್ಛೆಯಂತೆ ಬಿಡುವುದರೊಂದಿಗೆ ಆಕೆ ಪತಿಯೊಂದಿಗೆ ತೆರಳಿದಳು. ನಿನ್ನೆ ಮುಂಜಾನೆ ೪ ಗಂಟೆಗೆ ರುಶಾಲಿ ಮನೆಯಿಂದ ನಾಪತ್ತೆಯಾಗಿದ್ದಳು. ಈ ಬಗ್ಗೆ ತಾಯಿ ಕೆ. ಮಲ್ಲಿಕ ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದರು. ಮೀಪುಗುರಿಯಲ್ಲಿ ವಾಸಿಸುವ ಲೋಕೇಶ್ ಎಂಬ ಯುವಕನೊಂದಿಗೆ ಹೋಗಿರುವುದಾಗಿ ಸಂಶಯಿಸುವುದಾ ಗಿಯೂ ದೂರಿನಲ್ಲಿ ತಿಳಿಸಲಾಗಿತ್ತು. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಂತೆ ರುಶಾಲಿ ಹಾಗೂ ಲೋಕೇಶ್‌ರ ಮದುವೆ ಚಟ್ಟಂ ಚಾಲ್‌ನ ತೈರೆಯ ಕ್ಷೇತ್ರವೊಂದರಲ್ಲಿ ನಡೆದಿರುವುದಾಗಿ ತಿಳಿದುಬಂದಿದೆ.