ನಾಪತ್ತೆಯಾದ ಪ್ಲಸ್-ಟು ವಿದ್ಯಾರ್ಥಿನಿ, ಪ್ರಿಯತಮ ಸೆರೆ

ಕಾಸರಗೋಡು: ನಾಪತ್ತೆಯಾದ ಪ್ಲಸ್‌ಟು ವಿದ್ಯಾರ್ಥಿನಿ ಹಾಗೂ ೧೮ರ ಹರೆಯದ ಪ್ರಿಯತಮನನ್ನು ಕಾಞಂಗಾಡ್‌ನಿಂದ ಸೆರೆಹಿಡಿಯಲಾ ಗಿದೆ. ಇಡುಕ್ಕಿ ಜಿಲ್ಲೆಯ ಶಾಂತಂಪಾರ ಪೊಲೀಸ್ ಠಾಣೆ ವ್ಯಾಪ್ತಿಯ ೧೮ರ ಹರೆಯದ ಯುವಕ ಹಾಗೂ ದೇವಿ ಕುಳಂ ಪೊಲೀಸ್ ಠಾಣೆ ವ್ಯಾಪ್ತಿಯ ೧೬ರ ಹರೆಯದ ಬಾಲಕಿ ಸೆರೆಗೀಡಾದವರಾ ಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.  ಅವರ ಜೊತೆಗಿದ್ದ ತಮಿಳುನಾಡು ತಿರುಪ್ಪೂರ್ ನಿವಾಸಿಂiiನ್ನು ತನಿಖೆಗೊಳಪಡಿಸಿ ಬಿಡಲಾಯಿತು. ಘಟನೆ ಕುರಿತು ಪೊಲೀಸರು ಈ ರೀತಿ ತಿಳಿಸುತ್ತಿದ್ದಾರೆ. ಮೂರು ದಿನಗಳ ಹಿಂದೆ ಪ್ಲಸ್‌ಟು ವಿದ್ಯಾರ್ಥಿನಿ ಹಾಗೂ ಯುವಕ ಇಡುಕ್ಕಿಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಶಾಂತಂಪಾರ, ದೇವೀಕುಳಂ ಪೊಲೀಸ್ ಠಾಣೆಗಳಲ್ಲಿ ಕೇಸು ದಾಖಲಿಸಲಾಗಿದೆ.  ಸೈಬರ್ ಸೆಲ್‌ನ ಸಹಾಯದೊಂದಿಗೆ ಹುಡುಕಾಟ ನಡೆಸಿದಾಗ ಅವರ ಮೊಬೈಲ್  ಫೋನ್ ಸ್ವಿಚ್ ಆಫ್ ಆದ ಸ್ಥಿತಿಯಲ್ಲಿ ತ್ತು. ಆದ್ದರಿಂದ  ಅವರ ಕುರಿತು  ಯಾವುದೇ ಮಾಹಿತಿ ಲಭಿಸಿರಲಿಲ್ಲ. ತನಿಖೆ ಮುಂದು ವರಿಯುತ್ತಿದ್ದಂತೆ ಈ ಇಬ್ಬರು  ಹಾಗೂ  ತಿರುಪ್ಪೂರ್ ನಿವಾಸಿಯಾದ ಇನ್ನೋರ್ವನನ್ನು ಟಿಕೆಟ್ ಇಲ್ಲದ ಹಿನ್ನೆಲೆಯಲ್ಲಿ  ಟಿಟಿಆರ್ ಕಾಞಂಗಾಡ್ ನಲ್ಲಿ ಇಳಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಪೊಲೀಸರು ತನಿಖೆಗೊಳಪಡಿಸಿದಾಗ  ಕೈಯಲ್ಲಿ ಹಣವಿಲ್ಲದುದರಿಂದ ಟಿಕೆಟ್ ತೆಗೆಯದೆ ರೈಲಿಗೆ ಹತ್ತಿರುವುದಾಗಿಯೂ ಜತೆಗಿರುವ ಈ ವ್ಯಕ್ತಿಯೊಂದಿಗೆ ತಿರುಪ್ಪೂರ್‌ಗೆ ಕೆಲಸಕ್ಕೆ ಹೋಗುವುದಾಗಿ ಯುವಕ ಹಾಗೂ ಬಾಲಕಿ ತಿಳಿಸಿದ್ದಾರೆ. ಇದರಿಂದ ಸಂಶಯಗೊಂಡ ಪೊಲೀಸರು ಮೂವರನ್ನು ಠಾಣೆಗೆ ತಲುಪಿಸಿ  ಸಮಗ್ರವಾಗಿ ತನಿಖೆಗೊಳಪಡಿಸಿದಾಗ  ಜೋಡಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. ಊರಿನಿಂದ ಪರಾರಿಯಾದ ಬಳಿಕ ರೈಲಿನಲ್ಲಿ ಮಂಗಳೂರಿಗೆ ತಲುಪಿದ್ದರು. ಎರಡು ದಿನ ಅಲ್ಲಿನ ನಗರದಲ್ಲಿ ಸುತ್ತಾಡಿದಾಗ   ಕೈಯಲ್ಲಿದ್ದ ಹಣವೆಲ್ಲಾ ಖಾಲಿಯಾಯಿತು. ಮೂರನೇ ದಿನ  ನೀರು ಕುಡಿಯಲು ಕೂಡಾ ಗತಿಯಿಲ್ಲದಂತಾಯಿತು. ಈ ವೇಳೆ ತಿರುಪ್ಪೂರ್ ನಿವಾಸಿಯನ್ನು ಪರಿಚಯಗೊಂಡಿದ್ದಾರೆ.  ಆ ಜೋ ಡಿಯನ್ನು ವ್ಯಕ್ತಿ ಹೋಟೆಲ್‌ಗೆ ಕರೆದೊಯ್ದು ಆಹಾರ ನೀಡಿದ್ದಾನ. ತಿರುಪ್ಪೂರ್‌ಗೆ ಬಂದರೆ ಕೆಲಸ ದೊರಕಿಸುವುದಾಗಿ ಆತ ತಿಳಿಸಿದುದ ರಿಂದ ರೈಲಿಗೆ ಹತ್ತಿದ್ದರು.  ಆದರೆ ಟಿಕೆಟ್ ಇಲ್ಲದುದ ರಿಂದ ಸಿಕ್ಕಿ ಬೀಳಬಹುದೆಂದು   ಭಾವಿಸಿ ರಲಿಲ್ಲ ವೆಂದು  ಜೋಡಿ ಪೊಲೀಸರಲ್ಲಿ ತಿಳಿಸಿದ್ದಾರೆ. ಇದೇ ವೇಳೆ ತಿರುಪ್ಪೂರ್ ನಿವಾಸಿಯನ್ನು ಕಳುಹಿಸಿದ್ದು  ಯುವಕ ಹಾಗೂ  ಬಾಲಕಿಯ ಮನೆಯವರಿಗೆ  ವಿಷಯ ತಿಳಿಸಿ ಅವರನ್ನು ಕಾಞಂಗಾಡ್‌ಗೆ ಕರೆಸಲಾಗಿದೆ.

You cannot copy contents of this page