ನಾರಂಪಾಡಿ ಕ್ಷೇತ್ರದಲ್ಲಿ ಸಹಸ್ರ ಬ್ರಹ್ಮಕಲಶಾಭಿಷೇಕದೊಂದಿಗೆಸಮಾಪ್ತಿ: ನಾಳೆಯಿಂದ ವಾರ್ಷಿಕೋತ್ಸವ
ಬದಿಯಡ್ಕ: ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಇಂದು ಸಹಸ್ರ ಬ್ರಹ್ಮಕಲಶಾಭಿಷೇಕದೊಂದಿಗೆ ಸಮಾಪ್ತಿಯಾಗಲಿದ್ದು, ನಾಳೆಯಿಂದ ವಾರ್ಷಿಕೋತ್ಸವ ಆರಂಭಗೊಳ್ಳಲಿದೆ. ಕ್ಷೇತ್ರದಲ್ಲಿ ನಿನ್ನೆ ಬೆಳಿಗ್ಗೆ ಗಣಪತಿ ಹೋಮ, ವಿವಿಧ ಹೋಮಗಳು, ಬ್ರಹ್ಮಕಲಶ ಪೂಜೆ ಜರಗಿತು. ಧಾರ್ಮಿಕ ಸಭೆಯಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ವಾಗ್ಮಿ ಅಕ್ಷಯ ಗೋಖಲೆ ಕಾರ್ಕಳ ಧಾರ್ಮಿಕ ಉಪನ್ಯಾಸ ನೀಡಿದರು. ಸುಮಶ್ರೀ ಇಡಿಯಡ್ಕ ಬಳಗದವರಿಂದ ಭಕ್ತಿ ರಸಮಂಜರಿ, ರಂಗಸಿರಿ ಸಾಂಸ್ಕೃತಿಕ ವೇದಿಕೆಯವರಿಂದ ಯಕ್ಷಗಾನ ಬಯಲಾಟ, ಯೋಗ ಫಾರ್ ಕಿಡ್ಸ್ ಕರಂದಕ್ಕಾಡು ಇವರಿಂದ ಯೋಗ ನೃತ್ಯ, ನಾಟ್ಯನಿಲಯ ಮಂಜೇಶ್ವರ ಇವರ ಶಿಷ್ಯಂದಿರಿಂದ ಭರತನಾಟ್ಯ ಪ್ರದರ್ಶನಗೊಂಡಿತು.