ನಾರಾಯಣಮಂಗಲ ಶ್ರೀ ಚೀರುಂಬಾ ಭಗವತೀ ಕ್ಷೇತ್ರ ನಡಾವಳಿ ಉತ್ಸವ: ಆಮಂತ್ರಣಪತ್ರಿಕೆ ಬಿಡುಗಡೆ
ಕುಂಬಳೆ: ನಾರಾಯಣಮಂಗಲ ಶ್ರೀ ಚೀರುಂಭಾ ಭಗವತೀ ಕ್ಷೇತ್ರದಲ್ಲಿ ನಡೆಯಲಿರುವ ಮಹಾ ನಡಾವಳಿ ಉತ್ಸವದ ಯಶಸ್ವಿಗೆ ಸಿದ್ಧತೆಗಳು ಭರ ದಿಂದ ಜರಗುತ್ತಿದೆ. ನಡಾವಳಿ ಮಹೋ ತ್ಸವದ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಕ್ಷೇತ್ರದಲ್ಲಿ ಬಿಡುಗಡೆಗೊಳಿ ಸಲಾಯಿತು. ಕ್ಷೇತ್ರದ ಆಚಾರ ವರ್ಗ ದವರಾದ ಚಂದ್ರಶೇಖರ ಎಳೆ ಚೆಟ್ಟಿ ಯಾರ್‌ರಿಗೆ ಬ್ರಹ್ಮಶ್ರೀ ಉಳಾಲು ಬೀಡು ಪ್ರಕಾಶ ಕಡಮಣ್ಣಾಯ ಪ್ರತಿ ಹಸ್ತಾಂತರಿಸಿ ಬಿಡುಗಡೆಗೊಳಿಸಿದರು. ಬಳಿಕ ಅವರು ಆಶೀರ್ವಚನ ನೀಡಿದರು. ಈ ವೇಳೆ ಉತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಕೆ. ಮೋಹನ್‌ದಾಸ್ ಬೆಂಗಳೂರು ಮಾಹಿತಿ ನೀಡಿದರು. ಸಮಿತಿಯ ಅಧ್ಯಕ್ಷ ಪ್ರಮೋದ್ ಅತ್ತಾವರ ಅಧ್ಯಕ್ಷತೆ ವಹಿಸಿದರು. ಪ್ರಭಾಕರ ಕೂಡ್ಲು, ಕರುಣಾಕರ ಕಾರ್ನವರ್, ವಿಶ್ವನಾಥ ಮಡೆಯ, ದೇವದಾಸ್ ಕುಂಟಂಗೇರಡ್ಕ, ಎಂ. ನಾರಾಯಣ, ಕೃಷ್ಣರಾಜ್ ಪೆರ್ಲ, ದಿನೇಶ್ ಕುಂಟಂಗೇರಡ್ಕ, ನ್ಯಾಯವಾದಿ ಗಣೇಶ್ ಬದಿಯಡ್ಕ, ಚಂದ್ರಶೇಖರ ಕುಂಟಂಗೇರಡ್ಕ, ದಯಾನಂದ ನಾಯ್ಕಾಪು, ಭರತೇಶ್, ಪ್ರಮೋದ್ ನಾಯ್ಕಾಪು, ರಮೇಶ್ ಎನ್, ಗುಲಾಬಿಲಕ್ಷ್ಮಣ, ಸುನೇತ್ರ ಸುವರ್ಣ, ಸುಶೀಲಾ ಬಂದ್ಯೋಡು, ಸಂಧ್ಯಾ ದಿನೇಶ್, ರವಿ ನಾಯ್ಕಾಪು, ನರೇಂದ್ರ ಬದಿಯಡ್ಕ ಮಾತನಾಡಿದರು.