ನಿಧನ
ಹೊಸಂಗಡಿ: ಇಲ್ಲಿಗೆ ಸಮೀಪದ ಕಡಂಬಾರು ಸಂಕಬೈಲು ನಿವಾಸಿ ದಿ| ಕುಂಞಣ್ಣ ಅಡಪ ತಿರುವೈಲುಗುತ್ತು ಇವರ ಪತ್ನಿ ಕಮಲ ಅಡಪ (90) ನಿಧನ ಹೊಂದಿ ದರು. ಕೃಷಿಕೆ ಯಾಗಿದ್ದರು. ಮೃತರು ಮಕ್ಕಳಾದ ಸಂಕಬೈಲು ಸುಧಾಕರ ಅಡಪ, ಪ್ರಭಾಕರ ಅಡಪ, ಸತೀಶ್ ಅಡಪ (ಯಕ್ಷಬಳಗ ಸಂಸ್ಥಾಪಕರು), ಪ್ರವೀಣ್ ಅಡಪ, ಮಂಜುನಾಥ ಅಡಪ, ಭಾಸ್ಕರ ಅಡಪ, ಸೊಸೆಯಂದಿರಾದ ಕುಸುಮ, ಸುರೇಖ, ವಿಜಯ, ಜಯಂತಿ, ಸಿಸ್ತಿಲ, ಸಹೋದರ ಜಗನ್ನಾಥ ಶೆಟ್ಟಿ ಶಿರಿಯ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮಕ್ಕಳ ಪೈಕಿ ಬಾಲಕೃಷ್ಣ ಅಡಪ, ಸಹೋದರರಾದ ಶಿರಿಯ ಶಂಕರ ಶೆಟ್ಟಿ, ವಿಶ್ವನಾಥ ಶೆಟ್ಟಿ ಈ ಹಿಂದೆ ನಿಧನರಾ ಗಿದ್ದಾರೆ. ನಿಧನಕ್ಕೆ ಮೀಂಜ ಮಂಡಲ ಕಾಂಗ್ರೆಸ್ ಸಮಿತಿ ಸಂತಾಪ ಸೂಚಿಸಿದೆ.