ನಿರ್ಮಾಣ ಹಂತದ ಮನೆಯ ಸನ್‌ಶೇಡ್ ಕುಸಿದು ಕಾರ್ಮಿಕ ಮೃತ್ಯು

ಕುಂಬಳೆ: ನಿರ್ಮಾಣ ಹಂತದ ಮನೆಯ ಸನ್‌ಶೇಡ್ ದೇಹದ ಮೇಲೆ ಬಿದ್ದು ಅನ್ಯರಾಜ್ಯ ಕಾರ್ಮಿಕನೋರ್ವ ಮೃತಪಟ್ಟ ಘಟನೆ ನಡೆದಿದೆ. ಮೊಗ್ರಾಲ್ ಕುಟ್ಟಿಯಾನವಳಪ್ಪ್ ಕುತುಬಿನಗರ ಎಂಬಲ್ಲಿ ನಿನ್ನೆ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ಕೇರಿ ಎಂಬಲ್ಲಿನ ಅಮರೇಂದ್ರ (24) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಕುತುಬಿ ನಗರದಲ್ಲಿ ಸಮದ್ ಎಂಬವರ ನೂತನ ಮನೆಯ ಸನ್‌ಶೇಡ್‌ನ ಹಲಗೆ ತೆಗೆಯುತ್ತಿದ್ದಾಗ ಸನ್‌ಶೇಡ್ ದೇಹದ ಮೇಲೆ ಬಿದ್ದಿದೆ. ಅಮರೇಂದ್ರನನ್ನು ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿ ಪ್ರಥಮ ಚಿಕಿತ್ಸೆ ನೀಡಿದ್ದು, ಸ್ಥಿತಿ ಗಂಭೀರವಾದುದರಿಂದ ಚೆಂಗಳದ ಸಹಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

RELATED NEWS

You cannot copy contents of this page