ನಿವೃತ್ತ ಅಧ್ಯಾಪಕ ನಿಧನ

ಕಾಸರಗೋಡು: ನಿವೃತ್ತ ಅಧ್ಯಾಪಕ, ಲೇಖಕ ವಿ.ಆರ್. ಸದಾನಂದನ್ (69) ನಿಧನ ಹೊಂದಿದರು. ಮೂಲತಃ ಎರ್ನಾಕುಳಂ ಜಿಲ್ಲೆಯ ಕೊಳುಪ್ಪಳ್ಳಿ ಯವರಾದ ಇವರು ಕಳನಾಡಿನಲ್ಲಿ ವಾಸಿಸುತ್ತಿದ್ದರು. 1977ರಲ್ಲಿ ಅಧ್ಯಾಪಕರಾಗಿ ಕಾಸರ ಗೋಡಿಗೆ ತಲುಪಿದ ಇವರು ಚೆಂಬರಿಕ ಯು.ಪಿ ಶಾಲೆಯಲ್ಲಿ ಸೇವೆಗೆ ಪ್ರವೇಶಿ ಸಿದ್ದರು. ಕಳನಾಡು ಯುಜಿಎಲ್‌ಪಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾಗಿದ್ದರು. ಕೆಎಸ್‌ಟಿಎ, ಸಿಪಿಎಂ ನಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದರು. ಮೃತರು ಪತ್ನಿ ಎ. ಪುಷ್ಪಲತ, ಮಕ್ಕಳಾದ ಗಾಯತ್ರಿ ಎಸ್, ಹರಿ ಪ್ರಶಾಗ್ ಎಸ್, ಅಳಿಯ ಕ್ರಮೇಶ್ ಪಿ. ನಾಯಕ್, ಗಾಯತ್ರಿ ಆರ್. ಪ್ರಭು, ಸಹೋದರ ರಾದ ಮಾಧವ ನಾಯಕ್, ದಾಮೋದರ ನಾಯಕ್, ಗೋಪಿನಾಥ್, ಸಹೋದರಿ ಸರೋಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹವನ್ನು ಊರಿಗೆ ಕೊಂಡುಹೋಗಿ ಅಂತ್ಯಕ್ರಿಯೆ ನಡೆಸಲಾಯಿತು.

RELATED NEWS

You cannot copy contents of this page