ನಿವೃತ್ತ ಆರೋಗ್ಯ ಕಾರ್ಯಕರ್ತೆ ನಿಧನ
ಕಾಸರಗೋಡು: ಮಧೂರು ಮನ್ನಿ ಪ್ಪಾಡಿ ವಿವೇಕಾನಂದ ನಗರದ ನಿವೃತ್ತ ಎಸ್ಐ ನಾಗೇಶ್ ನಾಯ್ಕ್ರ ಪತ್ನಿ ಪಾರ್ವತಿ (58) ನಿಧನ ಹೊಂದಿ ದರು. ಕಾಸರಗೋಡು, ಮಂಜೇಶ್ವರ, ಕಾಞಂ ಗಾಡ್ ಸಹಿತ ವಿವಿಧೆಡೆ ಇವರು ಆರೋ ಗ್ಯ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ್ದರು. ಅಸೌಖ್ಯ ನಿಮಿತ್ತ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಇಂದು ಮುಂಜಾನೆ ನಿಧನ ಸಂಭವಿಸಿದೆ.
ಮೃತರು ಪತಿ, ಸಹೋದರ-ಸಹೋದರಿಯರಾದ ಜನಾರ್ದನ, ನಾರಾಯಣಿ, ಸೀತಾ, ಜಾನಕಿ, ಶಾರದ, ದೇವಕಿ, ಸುಶೀಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ರಾಘವ ಎಂಬವರು ಈ ಹಿಂದೆ ನಿಧನಹೊಂದಿದ್ದಾರೆ.