ನಿವೃತ್ತ ಗ್ರಾಮೀಣ ಬ್ಯಾಂಕ್ ಮೆನೇಜರ್ ನಿಧನ

ಉಪ್ಪಳ :ಮಂಗಲ್ಪಾಡಿ ಚೆ ರುಗೋಳಿ ನಿವಾಸಿ, ಗ್ರಾಮೀಣ ಬ್ಯಾಂಕ್‌ನ ನಿವೃತ್ತ ಮೆನೇಜರ್, ಸಾಮಾಜಿಕ, ಧಾರ್ಮಿಕ ಮುಂದಾಳು ರಾಮಚಂದ್ರ ಸಿ (70) ನಿಧನರಾದರು. ನಿನ್ನೆ ರಾತ್ರಿ ಮನೆಯಲ್ಲಿ ಹೃದಯ ಘಾತ ಉಂಟಾಗಿದ್ದು ಕೂಡಲೇ ಉಪ್ಪಳಕ್ಕೆ ಅಲ್ಲಿಂದ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಪ ಹೊತ್ತಿನಲ್ಲಿ ನಿಧನರಾದರು. ಚೆರುಗೋಳಿ ಶ್ರೀ ಚೀರುಂಬಾ ಭಗವತಿ ಕ್ಷೇತ್ರದ ಅಧ್ಯಕ್ಷರಾಗಿ, ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆ ಕಾಸರಗೋಡು ಜಿಲ್ಲಾ ಉಪಾ ಧ್ಯಕ್ಷರಾಗಿ, ಶ್ರೀ ಸದಾಶಿವ ಕ್ಷೇತ್ರ ಅಂಬಾರು, ಐಲ ದುರ್ಗಾಪರ ಮೇಶ್ವರಿ ಕ್ಷೇತ್ರದ ಬ್ರಹ್ಮ ಕಲಶ ಸಮಿತಿಯ ಉಪಾಧ್ಯಕ್ಷರಾಗಿಯು , ಸತ್ಯನಾರಾಯಣ ಭಜನಾ ಸಂಘ, ಶ್ರೀ ಸದಾಶಿವ ಕಲಾವೃಂದ, ಕೊಂಡೆಯೂರು ಶ್ರೀ ನಿತ್ಯಾನಂದ ಯೋಗಾ ಶ್ರಮ , ಹೀಗೆ ಹಲವಾರು ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಮೃತರು ಪತ್ನಿ ಜಯಂತಿ, ಮಕ್ಕಳಾದ ಸಾಯಿ ಪ್ರಸಾದ್, ಮಧುಸೂದನ, ಸೊಸೆ ಐಶ್ವರ್ಯ, ಸಹೋದರ ಭಾಸ್ಕರ ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

You cannot copy contents of this page