ನಿವೃತ್ತ ಮುಖ್ಯೋಪಾಧ್ಯಾಯ ಕಾರು ಢಿಕ್ಕಿ ಹೊಡೆದು ಮೃತ್ಯು

ಕುಂಬಳೆ: ಕ್ಷೇತ್ರ ದರ್ಶನ ನಡೆಸಿ ಮರಳುತ್ತಿದ್ದ ನಿವೃತ್ತ ಮುಖ್ಯೋಪಾಧ್ಯಾಯ ಕಾರು ಢಿಕ್ಕಿ ಹೊಡೆದು ಮೃತಪಟ್ಟ ದಾರುಣ ಘಟನೆ ನಡೆದಿದೆ.

ಕುಂಬಳೆಯಲ್ಲಿ ಅನಿಲ್ ಕುಂಬಳೆ ರಸ್ತೆ ನಿವಾಸಿಯಾದ ಬಾಲಕೃಷ್ಣನ್ (೭೯) ಎಂಬವರು ಮೃತಪಟ್ಟ ದುರ್ದೈವಿ. ಇವರು ಇಚ್ಲಂಗೋಡು ಇಸ್ಲಾಮಿಯ ಎಲ್.ಪಿ. ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾಗಿದ್ದಾರೆ. ನಿನ್ನೆ ರಾತ್ರಿ ೮.೩೦ಕ್ಕೆ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರದರ್ಶನ ನಡೆಸಿ ಮರಳುತ್ತಿದ್ದ ಇವರಿಗೆ ಬದಿಯಡ್ಕ ರಸ್ತೆಯಲ್ಲಿ ಇನ್ನೋವಾ ಕಾರು ಢಿಕ್ಕಿ ಹೊಡೆದಿದೆ. ಕೂಡಲೇ ಸ್ಥಳೀಯರು ಅವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ಪತ್ನಿ  ಲಕ್ಷ್ಮಿ, ಮಕ್ಕಳಾದ ಡಾ. ಜಯರಾಜ್, ಜಯಚಂದ್ರಿಕಾ (ಅಧ್ಯಾ ಪಿಕೆ), ಅಳಿಯಸಿ.ಕೆ. ಕಮಲಾಕ್ಷನ್ (ಮೃಗ ಸಂರಕ್ಷಣಾ ಇಲಾಖೆಯ ಫೀಲ್ಡ್ ಆಫೀಸರ್) ಸೊಸೆ ದೀಪ (ಅಧ್ಯಾ ಪಿಕೆ), ಸಹೋದರ- ಸಹೋದರಿಯರಾದ ಚೆಲ್ಲಪ್ಪನ್, ಚೆಲ್ಲಮ್ಮ, ತಂಗಮ್ಮ ಪೊನ್ನಮ್ಮ, ಸರಸ್ವತಿ, ಗೋಮತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page