ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನ ಮಾರಾಟ, ಸಂಗ್ರಹ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್‌ನಿಂದ ದಂಡ

ಪೆರ್ಲ: ಎಣ್ಮಕಜೆ ಪಂಚಾ ಯತ್‌ನ ವಿವಿಧ ಪ್ರದೇಶಗಳಲ್ಲಿ ಸ್ಥಳೀಯಾಡಳಿತ ಇಲಾಖೆಯ ಜಿಲ್ಲಾ ಎನ್‌ಫೋರ್ಸ್ ಮೆಂಟ್ ಸ್ಕ್ವಾಡ್ ನಡೆಸಿದ ತಪಾಸಣೆಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟಕ್ಕಾಗಿ  ಗೋಡೌನ್‌ಗಳಲ್ಲಿ ಸಂಗ್ರಹಿಸಿದ್ದ ಪೆರ್ಲದ ಸೂಪರ್ ಮಾರ್ಕೆಟ್ ಮಾಲಕ ಹಾಗೂ ಗೋದಾಮು ಮಾಲಕನಿಗೆ 10,000 ರೂ.ನಂತೆ ದಂಡ ಹೇರಿ ನಿಷೇಧಿತ ಉತ್ಪನ್ನಗಳನ್ನು ವಶಪಡಿಸಲಾಯಿತು. ಇವುಗಳನ್ನು ಪಂಚಾಯತ್ ಅಧಿಕಾರಿಗಳಿಗೆ ಹಸ್ತಾಂತರಿಸ ಲಾಯಿತು. ಹೊಟೇಲ್‌ಗಳ ತ್ಯಾಜ್ಯವನ್ನು ನಿರ್ಲಕ್ಷ್ಯವಾಗಿ ಉಪೇಕ್ಷಿಸಿರುವುದಕ್ಕೆ ಹೊಟೇಲ್ ಮಾಲಕನಿಗೆ 5000 ರೂ. ದಂಡ ಹೇರಿ ಪರಿಸರ ಶುಚಿಗೊಳಿಸಲು ನಿರ್ದೇಶಿಸಲಾಯಿತು. ಕಟ್ಟಡ ಸಮುಚ್ಚಯದ ಅಂಗಡಿಗಳಿಂದಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಪೂರ್ಣವಾಗಿ ಹಸಿರು ಕ್ರಿಯಾಸೇನೆಗೆ ಹಸ್ತಾಂತರಿಸದೆ ಆಂಶಿಕವಾಗಿ ಮಾತ್ರ ನೀಡುತ್ತಿರುವುದಾಗಿ ಪತ್ತೆಹಚ್ಚಿದ ಹಿನ್ನೆಲೆಯಲ್ಲಿ  ಇಡಿಯಡ್ಕದ ರೆಸಿಡೆನ್ಸಿ ಕಟ್ಟಡ ಮಾಲಕನಿಗೆ 5000 ರೂ. ದಂಡ ಹೇರಲಾಯಿತು. ತಪಾಸಣೆಯಲ್ಲಿ ಸ್ಕ್ವಾಡ್ ಲೀಡರ್ ಕೆ.ವಿ. ಮುಹಮ್ಮದ್ ಮದನಿ, ಪಂಚಾಯತ್ ಕ್ಲರ್ಕ್ ಮಣಿಕಂಠನ್ ಪಿ., ಸ್ಕ್ವಾಡ್ ಸದಸ್ಯ ಫಾಸಿಲ್ ಇ.ಕೆ. ಭಾಗವಹಿಸಿದರು.

You cannot copy contents of this page