ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಮಂದಿರಕ್ಕೆ ಶಿಲಾನ್ಯಾಸ 23ರಂದು
ನೀರ್ಚಾಲು: ಶ್ರೀ ಕುಮಾರಸ್ವಾಮಿ ಭಜನಾ ಸಂಘದ ನೂತನ ಭಜನಾ ಮಂದಿರದ ಶಿಲಾನ್ಯಾಸ ಈ ತಿಂಗಳ 13ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಶಿಲಾನ್ಯಾಸ ಗೈಯ್ಯುವರು ವೇದಮೂರ್ತಿ ಶಿವಶಂಕರ ಭಟ್, ಶಿಲ್ಪಿ ರಮೇಶ್ ಕಾರಂತ್ ಬೆದ್ರಡ್ಕ ವೈದಿಕ ಕಾರ್ಯಗಳಿಗೆ ನೇತೃತ್ವ ನೀಡುವರು. 11 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ಸ್ವಾಮೀಜಿ ಆಶೀರ್ವಚನ ನೀಡುವರು. ಧಾರ್ಮಿಕ ಮುಂದಾಳು ಗೋಪಾಲ ಕೃಷ್ಣ ಪೈ ಉದ್ಘಾಟಿಸುವರು. ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ಉಳಿಯ ವಿಷ್ಣು ಆಸ್ರ ಉಪಸ್ಥಿತರಿರುವರು. ಜ್ಯೋತಿಷಿ ಬೇಳ ಪದ್ಮನಾಭ ಶರ್ಮ, ಕೆ.ಕೆ. ಶೆಟ್ಟಿ, ಮಧುಸೂದನ ಆಯರ್, ದಿನಕರ ಭಟ್ ಸಹಿತ ಹಲವರು ಭಾಗವಹಿಸುವರು.
ಮಂದಿರದಲ್ಲಿ ಇಂದಿನಿಂದ 22ರ ತನಕ ಸಂಜೆ 6ರಿಂದ ವಿವಿಧ ಭಜನಾ ಸಂಘಗಳಿಂದ ಸಂಧ್ಯಾ ಭಜನೆ ಸಪ್ತಾಹ ನಡೆಯಲಿದೆ.