ನೀಲೇಶ್ವರ ಸುಡುಮದ್ದು ದುರಂತ: ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲು
ನೀಲೇಶ್ವರ: ನೀಲೇಶ್ವರ ಅಂಞಾ ಟಂಬಲ ವೀರರ್‌ಕಾವು ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ನಡೆಯುತ್ತಿದ್ದ ಸಂದರ್ಭದಲ್ಲಿ ಉಂಟಾದ ಸುಡುಮದ್ದು ದುರಂತದಲ್ಲಿ ನಾಲ್ವರು ಸಾವನ್ನಪ್ಪಿ, ಹಲವು ಮಂದಿ ಸುಟ್ಟು ಗಾಯಗೊಂಡ ಘಟನೆಗೆ ಸಂಬಂಧಿಸಿ ಆರೋಪಿಗಳ ವಿರುದ್ಧ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಗಳ ವಿರುದ್ಧ ಈ ಹಿಂದೆ ಕೊಲೆಯತ್ನ ಪ್ರಕರಣ ದಾಖಲಿಸಲಾಗಿತ್ತು. ಅದನ ಕೊಲೆ ಪ್ರಕರಣವನ್ನಾಗಿ ಬದಲಾಯಿಸುವ ಅನುಮತಿ ನೀಡುವಂತೆ ಕೋರಿ ಈ ಪ್ರಕರಣದ ತನಿಖೆ ನಡೆಸುತ್ತಿರುವ ಬಾಬು ಪೆರಿಂಙೋತ್ತ್ ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಇದೇ ಸಂದರ್ಭದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ಬಳಿಕ ಜಾಮೀನು ಲಭಿಸಿದ ಮೂವರು ಆರೋಪಿಗಳ ಜಾಮೀನು ರದ್ದುಪಡಿ ಸುವಂತೆ ತನಿಖಾ ತಂಡ ನ್ಯಾಯಾಲ ಯಕ್ಕೆ ಮೇಲ್ಮನವಿ ಸಲ್ಲಿಸಿದ್ದು, ಅದನ್ನು ನ್ಯಾಯಾಲಯ ನಾಳೆ ಪರಿಶೀಲಿಸಲಿದೆ. ಮಾತ್ರವಲ್ಲ ಈ ಪ್ರಕರಣದಲ್ಲಿ ಒಂದನೇ ಮತ್ತು ಎರಡನೇ ಆರೋಪಿಗಳಾದ ಕ್ಷೇತ್ರ ಆಡಳಿತ ಸಮಿತಿ ಅಧ್ಯಕ್ಷ ಕೆ.ಪಿ. ಚಂದ್ರಶೇಖರನ್ ಮತ್ತು ಕೆ.ಟಿ. ಭರತನ್‌ರಿಗೆ ನ್ಯಾಯಾಲಯದಲ್ಲಿ ಹಾಜರಾಗುವಂತೆ ಪೊಲೀಸರು ನೋಟೀಸು ನೀಡಿದ್ದಾರೆ. ಈ ಪ್ರಕರ ಣದ ಏಳನೇ ಆರೋಪಿಗೆ ಜಾಮೀನು ಲಭಿಸಿದರೂ ಇನ್ನೂ ಜೈಲಿನಲ್ಲೇ ಕಳೆಯುತ್ತಿದ್ದಾನೆ. ಈ ಪ್ರಕರಣದಲ್ಲಿ ಒಟ್ಟು 9 ಮಂದಿ ಆರೋಪಿಗಳಿದ್ದು, ಆ ಪೈಕಿ ನಾಲ್ವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.ನೀಲೇಶ್ವರ ಸುಡುಮದ್ದು ದುರಂತದಲ್ಲಿ ಕರಿಂದಳಂ ಕಿಣಾವೂರು ನಿವಾಸಿ ಆಟೋ ರಿಕ್ಷಾ ಚಾಲಕ ಸಂದೀಪ್ (38), ಚೋಯಂ ಗೋಡು ಕಿಣಾವೂರಿನ ರತೀಶ್ (48), ಚೋಯಂಗೋಡು ಕಿಣಾವೂರಿನ ಮಂಞಳಂಕಾಟ್ ಕೊಲ್ಲಂಬಾರದ ಬಿಜು (36) ಮತ್ತು ತುರುತ್ತಿ ಓರ್ಕಳದ ಶಿಬಿನ್ ರಾಜ್(19) ಎಂಬವರು ಸಾವನ್ನಪ್ಪಿದ್ದಾರೆ. 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಈ ಪೈಕಿ ಹಲವರ ಸ್ಥಿತಿ ಇನ್ನೂ ಗಂಭೀರವಾಗಿಯೇ ಮುಂದುವರಿಯುತ್ತಿದೆ.
ಅಕ್ಟೋಬರ್ 28ರಂದು ರಾತ್ರಿ ಇಡೀ ಊರನ್ನೇ ನಡುಗಿಸಿದ ಈ ದುರಂತ ಸಂಭವಿಸಿತ್ತು. ಈ ಪ್ರಕರಣದ ಇತರ ಆರೋಪಿಗಳ ಪತ್ತೆಗಾಗಿರುವ ಕಾರ್ಯಾಚರಣೆಯನ್ನು ಪೊಲೀಸರು ಮುಂದುವರಿಸಿದ್ದಾರೆ.