ನೆನ್ಮಾರ ಅವಳಿ ಕೊಲೆ ಪ್ರಕರಣದ ಆರೋಪಿ ಸೆರೆ
ಪಾಲಕ್ಕಾಡ್: ನೆನ್ಮಾರ ಎಂಬಲ್ಲಿ ಇಬ್ಬರನ್ನು ಕೊಲೆಗೈದ ಆರೋಪಿ ಚೆಂದಾಮರ ಎಂಬಾತನನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಕೊಲೆ ಕೃತ್ಯದ ಬಳಿಕ ತಲೆಮರೆಸಿಕೊಂಡಿದ್ದ ಚೆಂದಾಮರ ಪೋತುಂಡಿ ಎಂಬಲ್ಲಿನ ಕಾಡಿನಲ್ಲಿ ಅಡಗಿ ಕುಳಿತಿದ್ದನು.
ಕಳೆದ ಸೋಮವಾರ ಬೆಳಿಗ್ಗೆ ನೆನ್ಮಾರದಲ್ಲಿ ಇಡೀ ನಾಡನ್ನು ಬೆಚ್ಚಿಬೀಳಿಸಿದ ಕೊಲೆಕೃತ್ಯ ನಡೆದಿತ್ತು. 2019ರಲ್ಲಿ ಸಜಿತ ಎಂಬ ನೆರೆ ಮನೆ ನಿವಾಸಿಯನ್ನು ಕೊಲೆಗೈದಿದ್ದ ಪ್ರಕರಣದಲ್ಲಿ ಸೆರೆಗೀಡಾದ ಚೆಂದಾಮರ ಜಾಮೀನಿನಲ್ಲಿ ಬಿಡುಗಡೆಗೊಂಡ ಬಳಿಕ ಸಜಿತರ ಪತಿ ಸುಧಾಕರನ್ (56), ತಾಯಿ ಲಕ್ಷ್ಮಿ(75) ಎಂಬಿವರನ್ನು ಕಳೆದ ಸೋಮವಾರ ಕಡಿದು ಕೊಲೆಗೈದಿದ್ದಾನೆ. ಸಜಿತರೊಂದಿಗಿನ ದ್ವೇಷವೇ ಮನೆಯವರ ಕೊಲೆಗೆ ಕಾರಣವೆಂದು ಹೇಳಲಾಗುತ್ತಿದೆ.
ಕೊಲೆ ಕೃತ್ಯದ ಬಳಿಕ ತಲೆ ಮರೆಸಿಕೊಂಡಿದ್ದ ಆರೋಪಿಗಳಿಗಾಗಿ ಪೊಲೀಸರು ಹಾಗೂ ನಾಗರಿಕರು ವ್ಯಾಪಕ ಶೋಧ ನಡೆಸಿದ್ದರು. ಆರೋಪಿ ಸೆರೆಗೀಡಾದ ವಿಷಯ ತಿಳಿದೊಡನೆ ನಾಗರಿಕರು ನೆನ್ಮಾರ ಪೊಲೀಸ್ ಠಾಣೆ ಮುಂಭಾಗಕ್ಕೆ ತಲುಪಿ ಆರೋಪಿಯನ್ನು ತಮ ಗೊಪ್ಪಿಸಬೇಕೆಂಬ ಬೇಡಿಕೆಯೊಡ್ಡಿ ಪ್ರತಿಭಟನೆ ನಡೆಸಿದರು.