ಕೊಲ್ಲಂ: ನೆರೆಮನೆ ನಿವಾಸಿಯ ಗಬ್ಬದ ಹಸುವನ್ನು ಕಳವುಗೈದು ಕೊಂಡುಹೋಗಿ ಕೊಂದು ಮಾಂಸ ಮಾಡಿದ ಯುವಕ ಸೆರೆಯಾಗಿದ್ದಾನೆ. ಚಿರಕ್ಕರ ಒಳುಕುಪ್ಪಾರ ಕಾಲನಿ ಯಲ್ಲಿ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ಜಯಪ್ರಸಾದ್‌ರ ದನವನ್ನು ಆರೋಪಿ ಜಯಕೃಷ್ಣನ್ ಸಾಗಿಸಿ ಕೊಂದಿದ್ದಾನೆ ಎಂದು ಗೆಳೆಯನಿಗೆ ತಿಳಿಸಿದ್ದಾನೆ. ಬಳಿಕ ಅದನ್ನು ಪದಾ ರ್ಥ ಮಾಡಲು ಸಹಾಯ ಯಾಚಿ ಸಿದ್ದು, ಆದರೆ ಗೆಳೆಯ ಅದನ್ನು ನಿರಾ ಕರಿಸಿದ್ದಾನೆ. ಬಳಿಕ ಆತ ಪೊಲೀಸರಿಗೆ ಮಾಹಿತಿ ನೀಡಿದ್ದು, ಇದರಿಂದ ಈ ಘಟನೆಬಹಿರಂಗಗೊಂಡಿದೆ. ಪರವೂರ್ ಪೊಲೀಸರು ಸ್ಥಳಕ್ಕೆ ತಲುಪಿದರೂ ದನವನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಬಳಿಕ ಜಯಪ್ರಸಾದ್‌ರ ಫಾರ್ಮ್‌ನ ನೌಕರರು ತಲುಪಿದಾಗ ಹಟ್ಟಿಯಲ್ಲಿ ದನವೊಂದು ಕಂಡು ಬಂದಿರಲಿಲ್ಲ. ಬಳಿಕ ನಡೆಸಿದ ತನಿಖೆಯಲ್ಲಿ ಜಯಕೃಷ್ಣನ್‌ನ ಮನೆಯ ಅಡುಗೆ ಕೋಣೆಯಲ್ಲಿ ದನ ಸತ್ತು ಬಿದ್ದಿರುವು ದನ್ನು ಪತ್ತೆಹಚ್ಚಲಾಗಿದೆ. ಬಳಿಕ ಆರೋಪಿಯನ್ನು ಸೆರೆಹಿಡಿದು ನ್ಯಾಯಾ ಲಯಕ್ಕೆ ಹಾಜರುಪಡಿಸಲಾಗಿದೆ.
