ನೆಲಕ್ಕಪ್ಪಳಿಸಿದ ವಿದ್ಯುತ್ ಕಂಬಗಳು: ತಪ್ಪಿದ ಭಾರೀ ದುರಂತ

ಬದಿಯಡ್ಕ: ನಿನ್ನೆ ರಾತ್ರಿ ಬೀಸಿದ ಭಾರೀ ಗಾಳಿ ಹಾಗೂ ಮಳೆಗೆ ನೀರ್ಚಾಲು ಸಮೀಪ ದೇವರಮೆಟ್ಟು ಎಂಬಲ್ಲಿ ವಿದ್ಯುತ್ ಕಂಬಗಳು ನೆಲಕ್ಕಪ್ಪಳಿಸಿವೆ. ಒಂದು ಕಂಬ ಪೂರ್ಣವಾಗಿ ನೆಲಕ್ಕೆ ಅಪ್ಪಳಿಸಿದ್ದು, ಮತ್ತೆರಡು ವಾಲಿ ನಿಂತಿದೆ. ವಿದ್ಯುತ್ ಕಂಬ ನೆಲಕ್ಕಪ್ಪಳಿಸಿದುದರಿಂದ ತಂತಿಗಳು ಹರಡಿಕೊಂಡಿತ್ತು.  ಇದೇ ವೇಳೆ ಗಾಳಿ ಬೀಸಿದ್ದರೂ ಸಂಪರ್ಕ ಕಡಿದು ಕೊಳ್ಳುತ್ತಿರುವ ವಿದ್ಯುತ್  ನಿನ್ನೆ ತಂತಿಗಳು ನೆಲಕ್ಕೆ ಬಿದ್ದಿದ್ದರೂ ವಿದ್ಯುತ್ ಸರಬರಾಜು ವಿಚ್ಛೇಧನಗೊಂಡಿರಲಿಲ್ಲ. ಇಂದು ಬೆಳಿಗ್ಗೆ ಘಟನೆ ಅರಿತ ಸ್ಥಳೀಯರು  ಬದಿಯಡ್ಕ ವಿದ್ಯುತ್ ಕಚೇರಿಗೆ ಮಾಹಿತಿ ನೀಡಿದ ಬಳಿಕ ನೌಕರರು ತಲುಪಿ ವಿದ್ಯುತ್ ವಿಚ್ಛೇಧಿಸಿ ದ್ದಾರೆ. ಬೆಳಗಾಗುತ್ತಲೇ ಘಟನೆ ಅರಿವಿಗೆ ಬಂದಿರುವುದರಿಂದ ಭಾರೀ ಅಪಾಯವೊಂದು ತಪ್ಪಿ ಹೋಗಿದೆ.

RELATED NEWS

You cannot copy contents of this page