ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ
ಹೊಸದುರ್ಗ: ಮನೆಯೊಡೆಯನ ಮೃತದೇಹ ಮನೆಯ ಕಟ್ಟಿಗೆ ದಾಸ್ತಾನು ಕೇಂದ್ರದಲ್ಲಿ ನೇಣು ಬಿಗಿದ ತಿಯಲ್ಲಿ ಪತ್ತೆಯಾಗಿದೆ. ಚೆರುವತ್ತೂರು ಪುದಿಯಕಂಡಂ ನಿವಾಸಿ ಪಿ.ವಿ. ನಾರಾಯಣನ್ (70) ಮೃತಪಟ್ಟ ವ್ಯಕ್ತಿ. ಈ ಮೊದಲು ಚೆರುವತ್ತೂರಿನಲ್ಲಿ ಗೂಡಂಗಡಿ ನಡೆಸುತ್ತಿದ್ದರು. ಚಂದೇರ ಪೊಲೀಸರು ಕೇಸು ದಾಖಲಿಸಿದ್ದಾರೆ. ಮೃತರು ಪತ್ನಿ ಸರೋಜಿನಿ, ಮಕ್ಕಳಾದ ಸುಚಿತ್ರಾ, ಅಭಿಷೇಕ್, ಅಳಿಯ ಕೆ.ಪಿ. ಸುಭಾಷ್ ಹಾಗೂ ಸಹೋದರ ಸಹೋದರಿಯರನ್ನು ಅಗಲಿದ್ದಾರೆ.