ನೈತಿಕ ಪೊಲೀಸ್ಗಿರಿ: ಕಾಸರಗೋಡು ನಿವಾಸಿ ಮೇಲೆ ಹಲ್ಲೆ ನಡೆಸಿದ ಏಳು ಮಂದಿ ಸೆರೆ
ಕಾಸರಗೋಡು: ನೈತಿಕ ಪೊಲೀ ಸ್ಗಿರಿ ಸೋಗಿನಲ್ಲಿ ಕಾಸರಗೋಡು ನಿವಾಸಿ ಮೇಲೆ ಗೂಂಡಾ ದಾಳಿ ನಡೆಸಿದ ಪ್ರಕರಣದ ಏಳು ಮಂದಿಯನ್ನು ಕಣ್ಣೂರು ಧರ್ಮಡಂ ಪೊಲೀಸರು ಬಂಧಿಸಿದ್ದಾರೆ.
ಧರ್ಮಡಂ ಒಳಯಿಲ್ ಭಾಗದ ನಿವಾಸಿಗಳಾದ ಎಂ. ತಸ್ಮೀರ್ (36) ಮಾಂಙಟಡಂ ಕೆ.ಕೆ. ಅಜ್ನಾಸ್ (27), ಕಿಳಕ್ಕೆ ಪಾಲಯೋಟನ್ ಟಿ.ಕೆ. ಶಾನೀರ್ (32), ಮಾಂಙಟಡಂ ಕಂಡಂಕುನ್ನಿನ ಕೆ.ಕೆ. ಮುಹಮ್ಮದ್ ಅಷ್ಕರ್ (30) ಒಳಿಯಿಲ್ ಭಾಗಂನ ಕೆ. ಶಬೀರ್ (24), ಪಾಲಯೋಟ್ನ ಎ. ಮುಹಮ್ಮದ್ ಅಸ್ಕರ್ (37) ಮತ್ತು ಒಳಯಿಲ್ ಭಾಗದ ಅಹಮ್ಮದ್ ನಿಯಾಸ್ (33) ಬಂಧಿಕರಾದ ಆರೋಪಿಗಳು. ಧರ್ಮಡಂ ಪೊಲೀಸ್ ಠಾಣೆಯ ಎಸ್ಐ ಜೆ. ಸಜೀಮ್ರ ನೇತೃತ್ವದ ಪೊಲೀಸರ ತಂಡ ಇವರನ್ನು ಬಂಧಿಸಿದೆ. ಕಾಸರಗೋಡು ನಿವಾಸಿ ರೋಬಿನ್ ಥೋಮಸ್ ಎಂಬವರು ಧರ್ಮಡಂ ಪಾಲಯೋಟ್ನಲ್ಲಿರುವ ತನ್ನ ಸ್ನೇಹಿತನ ಮನೆಗೆ ಬೈಕ್ನಲ್ಲಿ ಅಕ್ಟೋಬರ್ 12ರಂದು ಮುಂಜಾನೆ ಹೋಗಿದ್ದರು. ಆಗ ಅಲ್ಲಿ ಆರೋಪಿಗಳು ನೈತಿಕ ಪೊಲೀಸ್ ಗಿರಿ ಸೋಗಿನಲ್ಲಿ ಅಲ್ಲಿಗೆ ಬಂದು ರೋಬಿನ್ರ ಮೇಲೆ ಹಲ್ಲೆ ನಡೆಸಿ ಬೈಕನ್ನು ಒಡೆದು ಹಾನಿಗೊಳಿಸಿ ಗೂಗಲ್ ಪೇ ಮೂಲಕ 5೦೦ ರೂ. ಪೇ ಮಾಡಿ ಅಲ್ಲಿಂದ ಪರಾರಿಯಾಗಿದ್ದರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ರೋಬಿನ್ ಆರೋಪಿಸಿದ್ದಾರೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನಂತರ ನ್ಯಾಯಾಂಗ ಬಂದನದಲ್ಲಿರಿಸಲಾಗಿದೆ.