ನೌಕಾ ಪಡೆಯ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

ನವದೆಹಲಿ: ಭಾರತೀಯ ನೌಕಾ ಪಡೆಯ ಮುಂದಿನ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್  ದಿನೇಶ್  ತ್ರಿಪಾಠಿ ಅವರನ್ನು ಕೇಂದ್ರ ಸರಕಾರ ನೇಮಿಸಿದೆ. ತ್ರಿಪಾಠಿ ತಮ್ಮ ಸುಮಾರು ೪೦ ವರ್ಷಗಳ ಸುದೀರ್ಘ ವೃತ್ತಿ ಜೀವನದಲ್ಲಿ ಅನೇಕ  ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ನಂತರ ಪ್ರಸ್ತುತ ನೌಕಾಪಡೆಯ ಸಿಬ್ಬಂದಿಯ ಉಪಾಧ್ಯಕ್ಷರಾಗಿದ್ದಾರೆ.  ಎಪ್ರಿಲ್ ೩೦ರಂದು ಅವರು ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ  ಅಧಿಕಾರ ವಹಿಸಿಕೊಳ್ಳಲಿದ್ದಾರೆ.

You cannot copy contents of this page