ಪಂಜಾಬ್‌ನ ಆಮ್ ಆದ್ಮಿ ಶಾಸಕ ಗೋಗಿ ಗುಂಡು ತಗಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಲುಧಿಯಾನ: ಆಮ್ ಆದ್ಮಿ ಪಕ್ಷದ ಶಾಸಕ ಗುರ್ಪ್ರೀತ್ ಗೋಗಿಯನ್ನು ಗುಂಡು ತಗಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಪಂಜಾಬ್‌ನ ಲುಧಿಯಾನ ವೆಸ್ಟ್ ಮಂಡಲದಿಂದಿರುವ ಶಾಸಕರಾಗಿ ದ್ದಾರೆ. ನಿನ್ನೆ ರಾತ್ರಿ ಪಿಸ್ತೂಲ್ ಶುಚೀಕರಿಸುವ ಮಧ್ಯೆ ಅಜಾಗರೂಕತೆಯಿಂದ ಸ್ವಂತವಾಗಿ ಗುಂಡು ಹಾರಿಸಿರಬೇಕೆಂದು ತಲೆಗೆ ಗುಂಡು ತಗಲಿರುವುದಾಗಿಯೂ ಅವರ ಕುಟುಂಬ ಸದಸ್ಯರು ತಿಳಿಸಿರುವುದಾಗಿ ಉನ್ನತ ಪೊಲೀಸ್ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಘಟನೆ ನಡೆಯುವಾಗ ಇವರು ಕೊಠಡಿಯಲ್ಲಿ ಏಕಾಂಗಿಯಾಗಿದ್ದರೆಂದು ಹೇಳಲಾಗಿದೆ. ಕೂಡಲೇ ಇವರನ್ನು ಆಸ್ಪತ್ರೆಗೆ ತಲುಪಿಸಲಾಗಿದ್ದರೂ ಆ ವೇಳೆ ಮೃತಪಟ್ಟರು. ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು ಅದರ ಬಳಿಕವೇ ಮರಣಕ್ಕೆ ಕಾರಣವೇನೆಂದು ಸ್ಪಷ್ಟವಾಗಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
೨೦೨೨ರಲ್ಲಿ ಗುರ್ಪ್ರೀತ್ ಆಮ್ ಆದ್ಮಿಗೆ ಸೇರಿದ್ದರು. ಇವರ ಪತ್ನಿ ಸುಕ್‌ಚೈನ್ ಕೌರ್ ಗೋಗಿ ನಗರಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರಾದರೂ ಕಾಂಗ್ರೆಸ್ ಅಭ್ಯರ್ಥಿಯೊಂದಿಗೆ ಸೋಲನುಭವಿಸಿದ್ದರು.