ಪಟ್ಲ ಶ್ರೀ ಭಗವತೀ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ಆರಂಭ
ಮಧೂರು: ಪಟ್ಲ ಶ್ರೀ ಭಗವತೀ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆ ಯುತ್ತಿದ್ದು, ನಿನ್ನೆ ಮೊದಲ ಕಳಿಯಾಟ ನಡೆಯಿತು. ಇಂದು ನಡು ಕಳಿಯಾಟ ಪ್ರಯುಕ್ತ ಕರೀಂದ್ರನ್ ದೈವ, ಪುಲಿಕಂಡನ್ ದೈವ, ಪುಲ್ಲೂರ್ಣನ್ ದೈವ, ಪುಲ್ಲೂರಾಳಿ ದೈವ ಹಾಗೂ ವಿಷ್ಣುಮೂರ್ತಿ ದೈವದ ದಶನ ನಡೆಯಿತು.
ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ 7ಕ್ಕೆ ಪುಲ್ಲೂರ್ಣನ್ ದೈವ, 8ಕ್ಕೆ ಕಾಳಪುಲಿಯನ್ ದೈವದ ವೆಳ್ಳಾಟ, ಏಣಿಯರ್ಪು ಪ್ರಾದೇಶಿಕ ಕಾಯ್ಚ ಕಮಿಟಿ ವತಿಯಿಂದ, ಭಗವತಿ ಯುವ ಜನ ಸಂಘ ಪಟ್ಲ ಇದರ ವತಿಯಿಂದ ಹುಲ್ಪೆ ಸಮರ್ಪಣೆ, ಮುದ್ರ ಯುವಜನ ಸಂಘ ಮಧೂರು ವತಿಯಿಂದ ನೀರಿನ ಟ್ಯಾಂಕ್ ಸಮರ್ಪಣೆ, ಶ್ರೀ ಭಗವತಿ ಯುವದ ಸಂಘ ಮಧೂರು ವತಿಯಿಂದ ಸುಡುಮದ್ದು ಪ್ರಯೋಗ, 9ಕ್ಕೆ ವಿಷ್ಣುಮೂರ್ತಿ ದೈವದ ತೊಡಂಙಲ್, 11ಕ್ಕೆ ಪುಷ್ಪಾರ್ಚನೆ, 11.30ಕ್ಕೆ ಪುಲಿಕಂಡನ್ ದೈವದ ವೆಳ್ಳಾಟ, ಪ್ರಧಾನ ಉತ್ಸವ ಬಲಿ, ಬಿಂಬದರ್ಶನ, 1 ಗಂಟೆಗೆ ವಿಷ್ಣುಮೂರ್ತಿ ದೈವದ ಕುಳಿಚ್ಚಾಟ, 1.30ಕ್ಕೆ ಪುಳ್ಳಿಕರಿಂಗಾಳಿ ದೈವದ ತೋಟ್ಟಂ, 2ಕ್ಕೆ ಪುಲ್ಲೂರಾಳಿ ದೈವದ ತೋಟ್ಟಂ, ನಾಳೆ ಮುಂಜಾನೆ 4ಕ್ಕೆ ಶ್ರೀ ಪುಳ್ಳಿ ಕರಿಂಗಾಳಿ ದೈವ, ಆಯಿರತ್ತಿರಿ ಮಹೋತ್ಸವ, ತುಲಾಭಾರ, 10 ಗಂಟೆಯಿAದ ವಿವಿಧ ದೈವಗಳ ದರ್ಶನ ನಡೆಯಲಿರುವುದು. ಕಳಿಯಾದ ಈ ತಿಂಗಳ 18ರ ವರೆಗೆ ಜರಗಲಿರುವುದು.