ಪತಿ ಮನೆಯಲ್ಲಿ ಕಿರುಕುಳ ಸಹಿಸಲಾಗದೆ ತಾಯಿ ಮನೆಗೆ ಹೋದ ಯುವತಿಗೆ ತಂದೆಯಿಂದಲೂ ಹಲ್ಲೆ: ಆತ್ಮಹತ್ಯೆಗೈಯ್ಯಲು ನಿರ್ಧರಿಸಿದ ಯುವತಿಯನ್ನು ರಕ್ಷಿಸಿದ ಯುವಕರು

ಕುಂಬಳೆ: ನಾಲ್ಕು ತಿಂಗಳು ಪ್ರಾಯದ  ಮಗುವಿನ ತಾಯಿಯಾದ ಯುವತಿಗೆ ಪೈಶಾಚಿಕ ರೀತಿಯಲ್ಲಿ ಹಲ್ಲೆ ನಡೆಸಿ  ಮಾನಸಿಕವಾಗಿ ಕಿರುಕುಳ ನೀಡಿದ ಆರೋಪದಂತೆ ಕುಂಬಳೆ ಪೊಲೀಸರು ಎರಡು ಕೇಸು ದಾಖಲಿಸಿಕೊಂಡಿದ್ದಾರೆ. ಕೊಯಿಪ್ಪಾಡಿ, ಪೆರುವಾಡ್ ಕಡಪ್ಪುರದ ೨೦ರ ಹರೆಯದ ಯುವತಿ ನೀಡಿದ ದೂರಿ ನಂತೆ  ಕೇಸು ದಾಖಲಿಸಿಕೊಂಡಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪತಿ ಪೆರುವಾಡ್ ಕಡಪ್ಪುರದ ಫಿರೋಸ್, ಮನೆಯವರಾದ ಅಬ್ದುಲ್ ರಹ್ಮಾನ್, ನಬೀಸ ಎಂಬಿವರ ವಿರುದ್ದ ಕೇಸು ದಾಖಲಿಸಲಾಗಿದೆ. 2024 ಎಪ್ರಿಲ್ 21ರಂದು ಯುವತಿ ಹಾಗೂ ಒಂದನೇ ಆರೋಪಿಯಾದ ಫಿರೋಸ್  ಮಧ್ಯೆ ಮದುವೆ ನಡೆದಿದೆ. 2025 ಮಾರ್ಚ್ 15ರಿಂದ ಅಗೋಸ್ತ್ 4ರ ವರೆಗೆ ಯುವತಿಗೆ ಮನೆಯಲ್ಲಿ ಆರೋಪಿ ಗಳು ಹಲ್ಲೆಗೈದಿರುವುದಾಗಿ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. ದೂರುದಾತೆ ಯುವತಿಗೆ ಸೌಖ್ಯವಿಲ್ಲದಿರುವುದರಿಂದ  ಫಿರೋಸ್‌ಗೆ ಬೇರೆ ಮದುವೆ ಮಾಡಬೇಕೆಂದು ತಿಳಿಸಿ ಶಾರೀರಿಕವಾಗಿ, ಮಾನಸಿಕವಾಗಿ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಪತಿ ಮನೆಯಲ್ಲಿ ಅನುಭವಿಸಬೇಕಾಗಿ ಬರುವ ಕಿರುಕುಳ ಸಹಿಸಲಾಗದೆ ಯುವತಿ ಪುಟ್ಟ ಮಗುವಿನೊಂದಿಗೆ ಕಳೆದ ಸೋಮವಾರ ಮಧ್ಯಾಹ್ನ ೨ ಗಂಟೆಗೆ  ಕಾರಡ್ಕದಲ್ಲಿರುವ ತಾಯಿ ಮನೆಗೆ  ತಲುಪಿದಾಗ ತಂದೆ ಮುಹಮ್ಮದ್ ಪೈಶಾಚಿಕವಾಗಿ ಹಲ್ಲೆಗೈದಿರುವುದಾಗಿ ಪೊಲೀಸರು ದಾಖಲಿಸಿಕೊಂಡ ಎರಡನೇ ಪ್ರಕರಣದಲ್ಲಿ ತಿಳಿಸಲಾಗಿದೆ.  ‘ಪತಿಯ ಮನೆಗೆ ಹೋಗು’ ಎಂದು ತಿಳಿಸಿ ತಂದೆ ಹಲ್ಲೆಗೈದಿರುವುದಾಗಿ ಯುವತಿಯ ದೂರಿನಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಾಯಿ ಮನೆಯಿಂದ ಹೊರಟುಬಂದ ಯುವತಿ ಕುಂಬಳೆಗೆ ತಲುಪಿ ಆತ್ಮಹತ್ಯೆಗೈಯ್ಯಲು ನಿರ್ಧರಿಸಿದ್ದಳೆನ್ನಲಾಗಿದೆ. ನಾಗರಿಕರು ಆಕೆಯನ್ನು ರಕ್ಷಿಸಿ  ಕುಂಬಳೆ ಸಿಎಚ್‌ಸಿಗೆ ತಲುಪಿಸಿದರು. ಅಲ್ಲಿಂದ ಬಳಿಕ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಪೊಲೀಸರು ತಲುಪಿ ಯುವತಿಯ ಹೇಳಿಕೆ ಸಂಗ್ರಹಿಸಿದ ಬಳಿಕ  ಕೇಸು ದಾಖಲಿಸಿ  ಆಕೆಯನ್ನು  ವಿದ್ಯಾನಗರದ ಲ್ಲಿರುವ ‘ಸಖಿ’ ಕೇಂದ್ರಕ್ಕೆ  ಸೇರಿಸಲಾಗಿದೆ.

You cannot copy contents of this page