ಪತ್ನಿಗೆ ನಿಂದಿಸಿ ಹಲ್ಲೆ: ಪತಿ ವಿರುದ್ಧ ಕೇಸು
ಕುಂಬಳೆ: ಯುವತಿಯನ್ನು ನಿಂದಿಸಿ, ಹಲ್ಲೆಗೈದು ಮಾನಸಿಕವಾಗಿ ಕಿರುಕುಳ ನೀಡಿದ ಆರೋಪದಂತೆ ಪತಿ ವಿರುದ್ಧ ಕುಂಬಳೆ ಪೊಲೀಸರುಕೇಸು ದಾಖಲಿಸಿಕೊಂಡಿದ್ದಾರೆ. ಪೆರಿಂಗಡಿ ನಿವಾಸಿ ಜಾಸ್ಮಿನ್ ಪಿ (39) ನೀಡಿದ ದೂರಿನಂತೆ ಪತಿ ಬಂಬ್ರಾಣ ಕಕ್ಕಳಂಕುನ್ನುವಿನ ಅಬ್ದುಲ್ಲ ಕುಂಞಿ ವಿರುದ್ಧ ಕೇಸು ದಾಖಲಿಸಿ ಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 2005 ಮಾರ್ಚ್ 18ರಂದು ಜಾಸ್ಮಿನ್ ಹಾಗೂ ಅಬ್ದುಲ್ಲ ಕುಂಞಿಯವರ ಮದುವೆ ನಡೆದಿದೆ. 2021 ಮೇ ತಿಂಗಳಿಂದ ಪತಿ ಅವಾ ಚ್ಯವಾಗಿ ನಿಂದಿಸಿ ಹಲ್ಲೆಗೈಯ್ಯುತ್ತಿರು ವುದಾಗಿ ಜಾಸ್ಮಿನ್ ಆರೋಪಿಸಿದ್ದಾರೆ.