ಪತ್ನಿಯನ್ನು ಇರಿದು ಕೊಲೆಗೈದ ಯುವಕನ ಮೃತದೇಹ ರೈಲುಹಳಿಯಲ್ಲಿ ಪತ್ತೆ

ತೃಶೂರ್: ಪತ್ನಿಯನ್ನು ಕೊಲೆಗೈದ ಯುವಕನ ಮೃತದೇಹ ರೈಲು ಹಳಿಯಲ್ಲಿ ಪತ್ತೆಯಾಗಿದೆ. ತೃಶೂರ್ ಮುರಿಂಙೋರ್‌ನಲ್ಲಿ ಇಂದು ಬೆಳಿಗ್ಗೆ ಘಟನೆ ಸಂಭವಿಸಿದೆ. ಮುರಿಂಙೋರ್ ನಿವಾಸಿ ಶೀಜಾರನ್ನು ಇರಿದು ಕೊಲೆಗೈದ ಪ್ರಕರಣದಲ್ಲಿ ಆರೋಪಿಯಾದ ಬಿನು ರೈಲು ಢಿಕ್ಕಿ ಹೊಡೆದು  ಮೃತಪಟ್ಟ ಸ್ಥಿತಿಯಲ್ಲಿ ಹಳಿಯಲ್ಲಿ ಪತ್ತೆಹಚ್ಚಲಾಗಿದೆ. ಕೊರಟ್ಟಿ ಕಮ್ಯೂನಿಟಿ ಹಾಲ್ ಹಿಂಭಾಗದ ರೈಲು ಹಳಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಪತ್ನಿಯನ್ನು ಕೊಲೆಗೈದ ಬಳಿಕ  ಬಾಬು ಮಕ್ಕಳಿಗೂ ಇರಿದು ಗಾಯಗೊಳಿಸಿದ್ದಾನೆ. ಗಂಭೀರ ಗಾಯಗೊಂಡ ಮಕ್ಕಳನ್ನು  ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಮಕ್ಕಳಲ್ಲಿ ಗಂಡು ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಕೊಲೆಯ ಬಳಿಕ ಈತನಿಗಾಗಿ ಪೊಲೀಸರು ಹುಡುಕಾಡುತ್ತಿದ್ದ ಮಧ್ಯೆ ಇಂದು ರೈಲು ಹಳಿಯಲ್ಲಿ ಮೃತದೇಹ ಪತ್ತೆಯಾಗಿದೆ

You cannot copy contents of this page