ಪದವಿ ವಿದ್ಯಾರ್ಥಿನಿ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಪದವಿ ವಿದ್ಯಾರ್ಥಿನಿ ನೇಣು ಬಿಗಿದು ಸಾವ ನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಉದುಮ ಬಾರ ಎರೋಳ್ ಕುಂಡಿನ ಒಕ್ಕಲಿಗ ಕುಟುಂಬಕ್ಕೆ ಸೇರಿದ ಸಂಜೀವ ರಾಮಯ್ಯ ಶೆಟ್ಟಿ-ವಿಜಯಲತ ದಂಪತಿ ಪುತ್ರಿ ಚಟ್ಟಂಚಾಲ್ ಎಂಐಸಿ ಕಾಲೇಜಿನ ಬಿಎಸ್ಸಿ (ಮ್ಯಾತ್ಸ್) ತೃತೀಯ ವರ್ಷ ವಿದ್ಯಾರ್ಥಿನಿ ಮೇಘ (೨೦) ಸಾವನ್ನಪ್ಪಿದ ಯುವತಿ. ಈಕೆ ಮೊನ್ನೆ ಸಂಜೆ ಮನೆಯೊಳಗೆ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಪರೀಕ್ಷೆಯಲ್ಲಿ ಮೇಘಳಿಗೆ ನಿರೀಕ್ಷಿಸಿದಷ್ಟು ಅಂಕ ಲಭಿಸಿರಲಿಲ್ಲ. ಅದರಿಂದ ಆಕೆ ತೀವ್ರ ನೊಂದಿದ್ದಳೆಂದು ಈ ಬಗ್ಗೆ ಮೇಲ್ಪರಂಬ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಮೇಘಳ ತಂದೆ ತಿಳಿಸಿದ್ದಾರೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದರು. ಮೃತಳು ಹೆತ್ತವರ ಹೊರತಾಗಿ ಸಹೋದರ ಆಕಾಶ್, ಸಹೋದರಿ ಪೂಜಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾಳೆ.