ಪರಾರಿಯಾದ ನೇಹಾ ಪ್ರಿಯತಮನೊಂದಿಗೆ ಪೊಲೀಸ್ ಠಾಣೆಯಲ್ಲಿ ಶರಣು: ಸ್ವ ಇಚ್ಛೆಯಂತೆ  ಬಿಟ್ಟಾಗ ಮಿರ್ಶಾದ್ ಜತೆಗೆ ತೆರಳಿದಳು

ಬದಿಯಡ್ಕ: ಅನ್ಯ ಮತೀಯ ಯುವಕನೊಂದಿಗೆ ಪರಾರಿಯಾದ ಖಾಸಗಿ ಸಂಸ್ಥೆಯ ಅಧ್ಯಾಪಿಕೆಯಾದ ಯುವತಿ ಪ್ರಿಯತಮನೊಂದಿಗೆ ಪೊಲೀಸ್ ಠಾಣೆಯಲ್ಲಿ ಶರಣಾಗಿ ದ್ದಾಳೆ. ಬಳಿಕ ಮೆಜಿಸ್ಟ್ರೇಟರ ಮುಂದೆ ಹಾಜರುಪಡಿಸಿದಾಗ ಯುವತಿಯನ್ನು ಸ್ವಂ ಇಷ್ಟದಂತೆ ಬಿಡಲಾಯಿತು. ಇದರಿಂದ ಯುವತಿ ಪ್ರಿಯತಮನೊಂದಿಗೆ ತೆರಳಿದಳು.

ಪಿಲಾಂಕಟ್ಟೆ ಕೋಳಾರಿಯ ನೇಹಾ (25) ಎಂಬಾಕೆ ನೆಕ್ರಾಜೆ ಮಾಳಂಗೈಯ ಮಿರ್ಶಾದ್ (25)ನ ಜೊತೆಗೆ ಕಳೆದ ಗುರುವಾರ ಪರಾರಿಯಾಗಿದ್ಧಳು. ನೇಹಾಳ ತಂದೆಯ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾಗ ಅವರಿಬ್ಬರು ಮದುವೆ ಯಾಗಲಿದ್ದಾರೆಂದು ತಿಳಿಸಿ ರಿಜಿಸ್ಟ್ರಾರ್ ಆಫೀಸ್ ಬೋರ್ಡ್‌ನಲ್ಲಿ ಭಾವಚಿತ್ರಗಳ ಸಹಿತ ನೋಟೀಸು ಲಗತ್ತಿಸಲಾಗಿತ್ತು.  ನಾಪತ್ತೆಯಾದ ನೇಹಾ ಹಾಗೂ ಮಿರ್ಶಾದ್‌ನನ್ನು ಪತ್ತೆಹಚ್ಚಲು ಪ್ರಯತ್ನ ನಡೆಯುತ್ತಿರುವಂತೆ ನಿನ್ನೆ ಬೆಳಿಗ್ಗೆ ಅವರಿಬ್ಬರು ನ್ಯಾಯವಾದಿಯ ಮುಖಾಂತರ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಹಾಜರಾಗಿದ್ದಾಳೆಂದು ತಿಳಿದುಬಂದಿದ್ದು, ಈ ಹಿನ್ನೆಲೆಯಲ್ಲಿ ಜನರು ಗುಂಪುಗೂಡಿದರು. ಇದರಿಂದ ಕಾಞಂಗಾಡ್ ಪೊಲೀಸ್ ಠಾಣೆಯಲ್ಲಿ ಶರಣಾಗಲು ಅವರು ನಿರ್ಧರಿಸಿದ್ದರು.

ನ್ಯಾಯವಾದಿಯ ಮುಖಾಂತರ ನೇಹಾ ಹಾಗೂ ಮಿರ್ಶಾದ್ ನಿನ್ನೆ ಸಂಜೆ ಪೊಲೀಸ್ ಠಾಣೆಯಲ್ಲಿ ಹಾಜರಾಗಿದ್ದಾರೆ. ವಿಷಯ ತಿಳಿದು ಅಲ್ಲಿಗೂ ಹಲವರು ತಲುಪಿದ್ದರು.  ಅಲ್ಲದೆ ಪೊಲೀಸರೊಂದಿಗೆ ವಾಗ್ವಾದ ನಡೆಯಿತು. ಈಮಧ್ಯೆ ನೇಹಾಳ ಹೇಳಿಕೆ ದಾಖಲಿಸಿಕೊಂಡ ಬಳಿಕ ಭಾರೀ ಪೊಲೀಸ್ ಬಂದೋಬಸ್ತ್ ನೊಂದಿಗೆ ಮೆಜಿಸ್ಟ್ರೇಟರ ಮನೆಯಲ್ಲಿ ಹಾಜರುಪಡಿಸಲಾಯಿತು.

RELATED NEWS

You cannot copy contents of this page