ಪಳ್ಳತ್ತಡ್ಕ ಶ್ರೀ ಅಯ್ಯಪ್ಪಮಂದಿರ ವಾರ್ಷಿಕೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

ಬದಿಯಡ್ಕ: ಪಳ್ಳತ್ತಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ ೪೮ ನೇ ವಾಷಿ ðಕೋತ್ಸವದ ಅಂಗವಾಗಿ ಬೆಳ್ಳಿಯ ಛಾಯಾಚಿತ್ರ ಪ್ರತಿಷ್ಠೆ ಹಾಗೂ ಅಯ್ಯಪ್ಪ ದೀಪೆÆÃತ್ಸವ ಡಿಸೆಂಬರ್ ೨೪ರಿಂದ ೨೬ರವರÉಗೆ ಜರಗಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಗುರುಸ್ವಾಮಿಗಳ ಸಂಗಮ ಕಾರ್ಯ ಕ್ರಮ ನಡೆಯಿತು. ಧಾರ್ಮಿಕ ಮುಂ ದಾಳು, ಉದ್ಯಮಿ ಬಿ. ನಿತ್ಯಾನಂದ ಶೆಣೈ ಬದಿಯಡ್ಕ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಹಾಗೂ ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಪೈ ಬದಿಯಡ್ಕ ಮುಖ್ಯ ಅತಿಥಿಯÁಗಿ ಭಾಗವಹಿಸಿದರು. ಉದಯಕೇಶವ ಭಟ್ ಕೋರಿಕ್ಕಾರು ಅಧ್ಯಕ್ಷತೆ ವಹಿಸಿದರು. ಸೀತಾರಾಮ ಗುರುಸ್ವಾಮಿ, ಗುಣಾಜೆ ರಾಮಕೃಷ್ಣ ಭಟ್, ಬಾಳಕುಮೇರಿ ವಿಷ್ಣು ಮಾಸ್ತರ್, ಅಣ್ಣು ನಾಯ್ಕ, ರಾಮದಾಸ್ ಶಾನುಬೋಗ್, ಕೃಷ್ಣ ಉದಯಗಿರಿ, ದೇವದಾಸ್, ವೀಣಾ ಆರ್.ಶೆಣೈ, ಉಷಾ ರಾಮನ್, ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು. ವಿವಿಧ ಭಜನಾ ಮಂದಿರಗಳ ಗುರುಸ್ವಾಮಿಗಳು ಭಾಗವಹಿಸಿದರು. ಗಂಗಾಧರ. ಪಳ್ಳತ್ತಡ್ಕ ಸ್ವಾಗತಿಸಿ, ಸಿಂಧು ವಂದಿಸಿದರು.

You cannot copy contents of this page