ಪಾಕಿಸ್ತಾನ ಕರೆನ್ಸಿ, ಎಂಡಿಎಂಎ ಸಹಿತ ಯುವಕ ಸೆರೆ
ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ 50 ರೂ.ಗಳ ಪಾಕಿಸ್ತಾನ ಕರೆನ್ಸಿ ಹಾಗೂ 2.790 ಗ್ರಾಂ ಎಂಡಿಎಂಎ ಸಹಿತ ಯುವಕ ಸೆರೆಗೀಡಾಗಿದ್ದಾನೆ. ಬೇಡಗಂ ಪೊಲೀಸ್ ಠಾಣೆ ವ್ಯಾಪ್ತಿಯ ಕೊಳತ್ತೂರು ಮಞನಡ್ಕದ ಅಬ್ದುಲ್ ಶರೀಫ್ (28) ಎಂಬಾತನನ್ನು ಬೇಕಲ ಎಸ್‌ಐ ಎನ್. ಅನ್ಸಾರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಪೆರಿಯಾಟಡ್ಕ- ಬೇಕಲ ರಸ್ತೆಯ ಮೌವ್ವಲ್‌ನಲ್ಲಿ ಅಬ್ದುಲ್ ಶರೀಫ್‌ನನ್ನು ತಪಾಸಣೆ ನಡೆಸಿದಾಗ ಪಾಕಿಸ್ತಾನ ಕರೆನ್ಸಿ ಹಾಗೂ ಎಂಡಿಎಂಎ ಪತ್ತೆಯಾಗಿದೆ.