ಪಾತೂರಿನಲ್ಲಿ ಚೆರ್ಕಳ ಅಬ್ದುಲ್ಲ, ಪಿ.ಬಿ. ಅಬ್ದುಲ್ ರಜಾಕ್ ಸಂಸ್ಮರಣೆ

ವರ್ಕಾಡಿ: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಾತೂರು ಶಾಖೆಯ ವತಿಯಿಂದ ಮುಸ್ಲಿಂ ಲೀಗ್ ನೇತಾರ ಮಂಜೇಶ್ವರ ಮಾಜಿ ಶಾಸಕರಾಗಿದ್ದ ಚೆರ್ಕಳ ಅಬ್ದುಲ್ಲ, ಪಿ.ಬಿ. ಅಬ್ದುಲ್ ರಜಾಕ್ ಸಂಸ್ಮರಣೆ, ನೂತನ ಕಚೇರಿಯ ಉದ್ಘಾಟನೆ ಪಾತೂರಿನಲ್ಲಿ ಜರಗಿತು. ಖಾಝಿ  ಪಿ.ಎಂ. ಅಹ್ಮದ್ ಮುಸ್ಲಿಯಾರ್ ಪ್ರಾರ್ಥಿಸಿದರು. ಐಯುಎಂಎಲ್ ರಾಜ್ಯ ಸಮಿತಿ ಕೌನ್ಸಿಲ್ ಸದಸ್ಯ ಪಿ.ಬಿ. ಅಬೂಬಕರ್ ಪಾತೂರು ಉದ್ಘಾಟಿಸಿದರು. ಯೂತ್ ಲೀಗ್ ನೇತಾರ ಝುಬೈರ್ ಮಾಸ್ತರ್ ಮಾತನಾಡಿದರು. ನೇತಾರರಾದ ಟಿ.ಎಂ. ಮೂಸ ಕುಂಞಿ ಹಾಜಿ ತೋಕೆ, ಎ. ಮಹಮ್ಮದ್ ಪಾವೂರು, ಉಮರಬ್ಬ ಆನೆಕಲ್ಲು, ಅಹಮ್ಮದ್ ಕುಂಞಿ ಕಜೆ,  ಅಹಮ್ಮದ್ ಹಾಜಿ, ಕೆ. ಹಸನ್ ಕುಂಞಿ, ಅಬ್ದುಲ್ಲ ಬಹರೈನ್, ಮಾಹಿನ್ ಕುಂಞಿ ಇ.ಎಂ, ಇಬ್ರಾಹಿಂ ಪಿ.ಕೆ, ಮೊಯ್ದೀನ್ ಕುಂಞಿ, ಮೊಯ್ದೀನ್ ಕುಂಞಿ ನಂದ್ರಬೈಲ್, ಮಹಮ್ಮದ್ ತಲಕ್ಕಿ, ಎನ್.ಎಂ. ರಝಾಕ್, ವಾರ್ಡ್ ಪ್ರತಿನಿಧಿ ಬಿ.ಎ. ಅಬ್ದುಲ್ ಮಜೀದ್ ಮಾತನಾಡಿದರು.  ಎನ್.ಎಂ. ಮೊಯ್ದೀನ್ ಕುಂಞಿ ಅಧ್ಯಕ್ಷತೆ ವಹಿಸಿದ್ದರು. ಪಿ.ಬಿ. ಕರೀಂ ಸ್ವಾಗತಿಸಿ, ಕರೀಂ ಪಚ್ಚಾರ್ ವಂದಿಸಿದರು. ಯೂತ್ ಲೀಗ್‌ನ ಯುವಜನ ರ‍್ಯಾಲಿಯ ನೋಂದಾವಣೆಗೆ  ಚಾಲನೆ ನೀಡಲಾಯಿತು.

You cannot copy contents of this page