ಪಾರ್ಕ್ನಲ್ಲಿ ಯುವತಿಯೊಂದಿಗೆ ಅನುಚಿತ ವರ್ತನೆ: ಕೇಂದ್ರ ವಿ.ವಿ ಅಧ್ಯಾಪಕನ ಅಮಾನತು
ಕಾಸರಗೋಡು: ಪರಶ್ಶಿನಿಕಡವಿನ ವಾಟರ್ ತೀಂಪಾರ್ಕ್ನಲ್ಲಿ ಯುವತಿ ಯೊಂದಿಗೆ ಅನುಚಿತವಾಗಿ ವರ್ತಿಸಿದ ಪ್ರಕರಣದಲ್ಲಿ ಆರೋಪಿಯಾದ ಅಧ್ಯಾಪಕನನ್ನು ಕೇರಳ ಕೇಂದ್ರ ವಿಶ್ವ ವಿದ್ಯಾಲಯ ಅಮಾನತುಗೊಳಿಸಿದೆ.
ಪೆರಿಯಾದಲ್ಲಿರುವ ಕೇರಳ ಕೇಂದ್ರ ವಿವಿಯ ಇಂಗ್ಲಿಷ್ ಆಂಡ್ ಕಂಪಾ ರಟಿವ್ ಲಿಟರೇಚರ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಬಿ. ಇಫ್ತಿಕರ್ ಅಹಮ್ಮದ್ (51)ನನ್ನು ವಿಶ್ವ ವಿದ್ಯಾಲಯದ ಉಸ್ತುವಾರಿ ಉಪಕುಲ ಪತಿ ಪ್ರೊ. ಕೆ.ಸಿ.ಬೈಜು ಅಮಾನತುಗೊಳಿ ಸಿದ್ದಾರೆ. ಇತ್ತೀಚೆಗೆ ಪಾರ್ಕ್ನ ವೇವ್ ಪೂಲ್ನಲ್ಲಿ ಸ್ನಾನ ಮಾಡುತ್ತಿದ್ದ ಮಲಪ್ಪುರಂ ನಿವಾಸಿಯಾದ 22ರ ಹರೆಯದ ಯುವತಿಯನ್ನು ಬಿಗಿದಪ್ಪಿ ಅನುಚಿತವಾಗಿ ವರ್ತಿಸಿದ ಆರೋಪ ದಂತೆ ತಳಿಪರಂಬ ಪೊಲೀಸರು ಇಫ್ತಿಕರ್ ಅಹಮ್ಮದ್ನನ್ನು ಬಂಧಿಸಿ ದ್ದರು. ಬಳಿಕ ತಳಿಪರಂಬ ಜ್ಯುಡೀಶಿ ಯಲ್ ಪ್ರಥಮದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ ಆರೋಪಿಗೆ ರಿಮಾಂ ಡ್ ವಿಧಿಸಿತ್ತು. ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ ಪ್ರಕರಣದ ಹಿನ್ನಲೆಯಲ್ಲಿ ಇದೀಗ ಇಫ್ತಿಕರ್ನನ್ನು ಅಮಾನತುಗೊಳಿಸಲಾಗಿದೆ. ಈ ಅಧ್ಯಾಪಕನನ್ನು ಈ ಹಿಂದೆ ಎರಡು ಬಾರಿ ವಿಶ್ವವಿದ್ಯಾಲಯ ಅಮಾನತು ಗೊಳಿಸಿತ್ತು. ತರಗತಿ ಕೊಠಡಿಯಲ್ಲಿ ವಿದ್ಯಾರ್ಥಿ ನಿಯೊಂದಿಗೆ ಅನುಚಿತ ವಾಗಿ ವರ್ತಿಸಿದ ಆರೋಪದಂತೆ ಮೊದಲು ಅಮಾನತುಗೊಳಿಸಲಾಗಿತ್ತು.
೨೦೨೩ ನವಂಬರ್ ೨೮ರಂದು ಅಮಾನತುಗೊಳಿಸಲಾಗಿತ್ತು. ಆದರೆ ದೂರು ತನಿಖೆ ನಡೆಸಿದ ಆಂತರಿಕ ದೂರು ಪರಿಹಾರ ಸಮಿತಿಯ ನಿರ್ದೇ ಶವನ್ನು ಪರಿಗಣಿಸಿ ಅಮಾನತು ರದ್ದುಗೊಳಿಸಲಾಗಿತ್ತು. ಈ ಸಂಬಂಧ ಬೇಕಲ ಪೊಲೀಸರು ಕೇಸು ದಾಖಲಿ ಸಿದ ಹಿನ್ನೆಲೆಯಲ್ಲಿ ಎರಡನೇ ಬಾರಿ ಅಮಾನತು ಕ್ರಮ ಕೈಗೊಳ್ಳಲಾಗಿತ್ತು.