ಪಾಲಕ್ಕಾಡ್ನಲ್ಲಿ ಶೋಭಾ ಸುರೇಂದ್ರನ್ ಹೆಸರು ಪರಿಗಣನೆ
ಪಾಲಕ್ಕಾಡ್: ಪಾಲಕ್ಕಾಡ್ ವಿಧಾನಸಭೆಗೆ ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿಯ ಹಿರಿಯ ನೇತಾರೆ ಶೋಭಾ ಸುರೇಂದ್ರನ್ರ ಹೆಸರನ್ನು ಬಿಜೆಪಿ ಪರಿಗಣಿಸುತ್ತಿದೆ.
ಶೋಭಾ ಸುರೇಂದ್ರನ್ರನ್ನೇ ಈ ಕ್ಷೇತ್ರದಲ್ಲಿ ಕಣಕ್ಕಿಳಿಸುವಂತೆ ಇನ್ನೊಂ ದೆಡೆ ಸಂಸದ ಸುರೇಶ್ ಗೋಪಿ ಕೂಡಾ ಬಿಜೆಪಿಯ ಕೇಂದ್ರ ನೇತೃತ್ವದೊಡನೆ ಕೇಳಿಕೊಂಡಿದ್ದಾರೆ. ಈ ವಿಷಯದಲ್ಲಿ ಬಿಜೆಪಿ ತೀರ್ಮಾನ ಇಂದು ಉಂಟಾ ಗುವ ಸಾಧ್ಯತೆ ಇದೆ. ಕಳೆದ ಲೋಕಸಭಾ ಚುನಾವಣೆಯ ಆಲಪ್ಪುಳ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಶೋಭಾ ಸುರೇಂದ್ರನ್ ಭರ್ಜರಿ ಮತಗಿಟ್ಟಿಸಿಕೊಂಡು ಗೆಲುವಿನ ಸನಿಹಕ್ಕೆ ತಲುಪಿದ್ದರು. ಅದನ್ನು ಪರಿಗಣಿಸಿ ಪಾಲಕ್ಕಾಡ್ನಲ್ಲಿ ಅವರನ್ನೇ ಕಣಕ್ಕಿಳಿಸಬೇಕೆಂದು ಬಿಜೆಪಿಯ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಎನ್. ಶಿವರಾಜನ್ ಕೂಡಾ ಹೇಳಿದ್ದಾರೆ.