ಪಾಲಕ್ಕಾಡ್ ಬಳಿ ಭೀಕರ ವಾಹನ ಅಪಘಾತ: 5 ಮಂದಿ ದಾರುಣ ಮೃತ್ಯು
ಪಾಲಕ್ಕಾಡ್: ಕಾರು ಹಾಗೂ ಲಾರಿ ಢಿಕ್ಕಿ ಹೊಡೆದು ಐದು ಮಂದಿ ಮೃತಪಟ್ಟ ದಾರುಣ ಘಟನೆ ಪಾಲಕ್ಕಾಡ್‌ನ ಸಮೀಪ ಕಲ್ಲಡಿಕೋಡ್ ಎಂಬಲ್ಲಿ ಸಂಭವಿಸಿದೆ. ಕೊಂಗಾಡಮಣ್ಣಾಂಪರ ನಿವಾಸಿ ಕೃಷ್ಣನ್‌ರ ಪುತ್ರ ಕೆ.ಕೆ. ವಿಜೇಶ್ (35, ವೀಂಡಪ್ಪಾರ ನಿವಾಸಿ ಚಿದಂಬರನ್‌ರ ಪುತ್ರ ರಮೇಶ್ (31). ವಳ್ಳಯಂತೋಡ್ ನಿವಾಸಿ ವಿಜಯ ಕುಮಾರ್‌ರ ಪುತ್ರ ವಿಷ್ಣು (30), ಕೊಂಗಾಡ್ ಮಣಿಕ್ಕಶೇರಿ ಎಸ್ಟೇಟ್ ಮೆಹಮೂದ್‌ರ ಪುತ್ರ ಮುಹಮ್ಮದ್ ಅಪ್ಸಲ್ (17) ಎಂಬಿವರು ಮೃತಪಟ್ಟವರೆಂದು ತಿಳಿದು ಬಂದಿದೆ. ಇನ್ನೊಬ್ಬರ ಮಾಹಿತಿ ಲಭ್ಯವಾಗಿಲ್ಲ. ನಿನ್ನೆ ರಾತ್ರಿ 11 ಗಂಟೆ ವೇಳೆ ಅಪಘಾತವುಂಟಾಗಿದೆ. ಪಾಲಕ್ಕಾಡ್ ಭಾಗದಿಂದ ಬಂದ ಕಾರು ಹಾಗೂ ಕೊಯಂಬತ್ತೂರು ಭಾಗಕ್ಕೆ ತೆರಳುತ್ತಿದ್ದ ಸರಕು ಲಾರಿ ಢಿಕ್ಕಿ ಹೊಡೆದು ಅಪಘಾತವುಂಟಾಗಿದೆ.