ಪಿಕಪ್-ಟೂರಿಸ್ಟ್ ಬಸ್ ಢಿಕ್ಕಿ: ಚಾಲಕನಿಗೆ ಗಾಯ

ಮಂಜೇಶ್ವರ: ಪಿಕಪ್ ಮತ್ತು ಟೂರಿಸ್ಟ್ ಬಸ್ ಮುಖಾಮುಖಿಯಾಗಿ ಪಿಕಪ್ ಚಾಲಕ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ಉಪ್ಪಳ ಗೇಟ್ ಬಳಿ ಸಂಭವಿಸಿದೆ. ಹೊಸಂಗಡಿ ಭಾಗದಿಂದ ಉಪ್ಪಳಕ್ಕೆ ಆಗಮಿಸುತ್ತಿದ್ದ ಪಿಕಪ್ ಹಾಗೂ ಹೊಸಂಗಡಿ ಭಾಗಕ್ಕೆ ತೆರಳುತ್ತಿದ್ದ ಟೂರಿಸ್ಟ್ ಖಾಲಿ ಬಸ್  ಉಪ್ಪಳ ಗೇಟ್ ಬಳಿ ಹೆದ್ದಾರಿ ಬಳಿ ಮುಖಾಮುಖಿ ಯಾಗಿ ಅಪಘಾತ ಸಂಭವಿಸಿದೆ. ಇದರಿಂದ ಬಸ್‌ನ ಮುಂ ಭಾಗ ಹಾಗೂ ಪಿಕಪ್‌ಗೂ ಹಾನಿಯುಂ ಟಾಗಿದ್ದು ಚಾಲಕ ಕಾಸರಗೋಡು ನಿವಾಸಿ ಸನತ್‌ರಾಜ್‌ನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರ ಬಳಿಯಲ್ಲೇ ನೀರಿನ ಟ್ಯಾಂಕರ್ ಹಾಗೂ ಸರಕು ಹೇರಿದ್ದ ಲಾರಿ ಢಿಕ್ಕಿ ಹೊಡೆದು ಅಪಘಾತ ಸಂಭವಿ ಸಿದ್ದು, ವಾಹನಗಳಿಗೆ ಹಾನಿಯುಂಟಾ ಗಿದೆ. ಉಪ್ಪಳ ಭಾಗಕ್ಕೆ ತೆರಳುತ್ತಿದ್ದ ನೀರು ವಿತರಿಸುವ ಟ್ಯಾಂಕರ್ ಲಾರಿ ಮತ್ತು ಹೊಸಂಗಡಿ ಭಾಗಕ್ಕೆ ತೆರಳುತ್ತಿದ್ದ ಲಾರಿ ಮಧ್ಯೆ ಅಪಘಾತ ಸಂಭವಿಸಿದೆ.  ಪೊಲೀ ಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿ ದ್ದಾರೆ. ಇದೇ ಪರಿಸರದಲ್ಲಿ ಇತ್ತೀಚೆಗೆ ಕರ್ನಾಟಕ ಸಾರಿಗೆ ಬಸ್ ಮತ್ತು ಲಾರಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು.

RELATED NEWS

You cannot copy contents of this page