ಕಾಸರಗೋಡು: ಸತತವಾಗಿ ಮಾದಕದ್ರವ್ಯ ಮಾರಾಟ ದಂಧೆಯಲ್ಲಿ ನಿರತರಾದವರನ್ನು ಸೆರೆಹಿಡಿಯಲೆಂದು ಹೊಸದಾಗಿ ರೂಪು ನೀಡಿದ ಪಿಟ್ ಎನ್ ಡಿಪಿಎಸ್ ಕಾನೂನು ಪ್ರಕಾರ ಹಲವು ಮಾದಕದ್ರವ್ಯ ಪ್ರಕರಣಗಳಲ್ಲಿ ಆರೋಪಿಯಾಗಿರುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹೊಸದುರ್ಗ ಕೊಳವಂiiಲ್ ಇಟ್ಟುಮ್ಮಲ್ ಪೊರೆಯಿಲ್ ಹೌಸ್‌ನ ನಿಝಾಮುದ್ದೀನ್ ಪಿ.ಪಿ (35) ಬಂಧಿತ ಆರೋಪಿ. ನಿರಂತರವಾಗಿ ಮಾದಕದ್ರವ್ಯ ಪ್ರಕರಣಗಳಲ್ಲಿ ಆರೋಪಿಯಾಗಿರುವವರ ವಿರುದ್ದ ಪ್ರಿವೆನ್ಶನ್ ಆಫ್ ಇಲ್ಲಿಸಿಟ್ ಟ್ರಾಫಿಕ್ ಎನ್‌ಡಿಪಿಎಸ್ (ಪಿಟ್-ಎನ್‌ಡಿಪಿಎಸ) ಪ್ರಕಾರ ಬಂಧಿಸುವ ಹೊಸ ಕಾನೂನಿಗೆ ರಾಜ್ಯ ಸರಕಾರ ಇತ್ತೀಚೆಗೆ ರೂಪು ನೀಡಿತ್ತು. ಆ ಕಾನೂನಿನ ಪ್ರಕಾರ ಈತನನ್ನು ಬಂಧಿಸಲಾಗಿದೆ. ಈತ ಈ ಕಾನೂನು ಪ್ರಕಾರ ಜಿಲ್ಲೆಯಲ್ಲಿ ಬಂಧಿತನಾದ ನಾಲ್ಕನೇ ವ್ಯಕ್ತಿಯಾಗಿದ್ದಾನೆ. ಈ ಕಾನೂನು ಪ್ರಕಾರ ಬಂಧಿತರಾಗುವ ವರನ್ನು ಬಳಿಕ ಯಾವುದೇ ರೀತಿಯ ವಿಚಾರಣೆಯೂ ಇಲ್ಲದೆ ಒಂದು ವರ್ಷ ತನಕ ಜೈಲಿನಲ್ಲಿ ಕೂಡಿ ಹಾಕಲಾಗುತ್ತದೆ.
ಮಾದಕದ್ರವ್ಯವಾದ 72.73 ಗ್ರಾಂ ಎಂಡಿಎಂಎ ಕೈವಶವಿರಿಸಿ ಕೊಂಡಿದ್ದ ಆರೋಪದಂತೆ ನಿಝಾಮುದ್ದೀನ್‌ನನ್ನು ಕಳೆದ ಡಿಸೆಂಬರ್‌ನಲ್ಲಿ ತಲಪ್ಪಾಡಿಯಿಂದ ಮಂಜೇಶ್ವರ ಪೊಲೀಸರು ಬಂಧಿಸ ಕೇಸು ದಾಖಲಿಸಿಕೊಂಡಿದ್ದರು. ಇದರ ಹೊರತಾಗಿ ಈತನ ವಿರುದ್ದ ಬೇಕಲ ಪೊಲೀಸ್ ಠಾಣೆಯಲ್ಲೂ ಎರಡು ಕೇಸುಗಳಿವೆಯೆಂದು ಪೊಲೀಸರು ತಿಳಿಸಿದ್ದಾರೆ.
ಹೊಸದುರ್ಗ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ನೇತೃತ್ವದಲ್ಲಿ ಎಸ್‌ಐ ಎ.ಆರ್. ಶರಂಗ್‌ಧರನ್, ಎಎಸ್‌ಐ ಎಂ. ಪ್ರಕಾಶನ್, ಸೀನಿಯರ್ ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಎ.ಆರ್. ಸನೋಜ್ ಮತ್ತು ಸಿ.ವಿ. ಬೈಜು ನೇತೃತ್ವದ ಪೊಲೀಸರ ತಂಡ ಈತನನ್ನು ಬಂಧಿಸಿದೆ. ಈ ಹೊಸ ಕಾನೂನು ಪ್ರಕಾರ ಹೊಸದುರ್ಗ ಪೊಲೀಸ್ ಸಬ್ ಡಿವಿಶನ್‌ನಲ್ಲಿ ಬಂಧಿತನಾಗುವ ಮೊದಲ ವ್ಯಕ್ತಿ ಆಗಿ ಈತನಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.