ಪಿಲಿಕುಂಜೆಯಲ್ಲಿ ಇಂದು ನಡುಕಳಿಯಾಟ
ಕಾಸರಗೋಡು: ಪಿಲಿಕುಂಜೆ ಶ್ರೀ ಐವರ್ ಭಗವತಿ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವದಂಗವಾಗಿ ಇಂದು ಬೆಳಿಗ್ಗೆ ಕಾಳಪುಲಿಯನ್, ಪುಲಿಕಂಡನ್, ಪುಲ್ಲೂರ್ಣನ್, ಪುಲ್ಲೂರಾಳಿ ಹಾಗೂ ವಿಷ್ಣುಮೂರ್ತಿ ದೈವಗಳ ದರ್ಶನ ನಡೆಯಿತು. ಮಧ್ಯಾಹ್ನ 12 ಗಂಟೆಗೆ ನಡುಕಳಿಯಾಟ ಆರಂಭಗೊಳ್ಳಲಿದೆ. ಸಂಜೆ 5ರಿಂದ ಪುಲ್ಲೂರ್ಣನ್, ವೇಟ್ಟಕೊರು ಮಗನ್, ಕಾಳಪುಲಿಯನ್ ದೈವಗಳ ವೆಳ್ಳಾಟ, ರಾತ್ರಿ 8ಕ್ಕೆ ಮಡಪ್ಪುರ ಶ್ರೀ ಮುತ್ತಪ್ಪನ್ ತಿರುಮುಲ್ ಕಾಯ್ಚ ಸಮಿತಿ ಹಾಗೂ ಶ್ರೀ ಭಗವತಿ ಮಹಿಳಾ ಸಂಘದ ವತಿಯಿಂದ ಹುಲ್ಪೆ ಸಮರ್ಪಣೆ, 8.30ಕ್ಕೆ ಪುಷ್ಪಾರ್ಚನೆ ಪೂಜೆ, 9.30ಕ್ಕೆ ಪುಲಿಕಂಡನ್ ದೈವದ ವೆಳ್ಳಾಟ, ಬಲಿ ಯುತ್ಸವ, ಬಿಂಬ ದರ್ಶನ, 11ರಿಂದ ಪುಳ್ಳಿಕರಿಂಗಾಳಿಯಮ್ಮ, ಪುಲ್ಲೂರಾಳಿ, ಮಂತ್ರಮೂರ್ತಿ ಎಂಬೀ ದೈವಗಳ ತೋಟಂ, ವಿಷ್ಣುಮೂರ್ತಿ ದೈವದ ತುಡಂಙಳ್, ಕುಳಿಚ್ಚಾಟಂ, ನಾಳೆ ಮುಂಜಾನೆ 4.30ಕ್ಕೆ ಸಾವಿರ ದೀಪೋತ್ಸವ, ಶ್ರೀ ಪುಳ್ಳಿಕರಿಂಗಾಳಿಯಮ್ಮನವರ ಆಗಮನ ನಡೆಯಲಿದೆ. ಮಹೋತ್ಸವ 27ರವರೆಗೆ ವಿವಿಧ ದೈವಗಳ ದರ್ಶನದೊಂದಿಗೆ ಮುಂದುವರಿಯಲಿದೆ.