ಪಿಲಿಕುಂಜೆ ರಸ್ತೆ ಬದಿ ಗೂಡಂಗಡಿ: ತೆರವಿಗೆ ನೋಟೀಸು

ಕಾಸರಗೋಡು: ಪಿಲಿಕುಂಜೆ ಲೋಕೋಪಯೋಗಿ ಇಲಾಖೆ ಕಚೇರಿ ಮುಂಭಾಗ ಇತ್ತೀಚೆಗೆ ಗೂಡಂಗಡಿ ಒಂದನ್ನು ಸ್ಥಾಪಿಸಲಾಗಿದ್ದು, ಇದು ಅನಧಿಕೃತವಾಗಿದೆ ಎಂದು ಲೋಕೋಪಯೋಗಿ ಇಲಾಖೆ ಗೂಡಂಗಡಿಗೆ ನೋಟೀಸು ಅಂಟಿಸಿದೆ. ಆದರೆ ಗೂಡಂಗಡಿ ಇಲ್ಲಿ ಸ್ಥಾಪಿಸಿದ್ದು ಯಾರು  ಎಂಬ ಬಗ್ಗೆ ತಿಳಿದುಬಂದಿಲ್ಲ. ಮೂರು ದಿನದ ಹಿಂದೆ ಇಲ್ಲಿ ಗೂಡಂಗಡಿ ಪ್ರತ್ಯಕ್ಷಗೊಂಡಿದ್ದು, ಆದರೆ ತೆರೆದು ಕಾರ್ಯಾಚರಿಸಿಲ್ಲ. ಈ ಹಿನ್ನೆಲೆಯಲ್ಲಿ ಇದನ್ನು ಇಲ್ಲಿಂದ ಸ್ಥಳಾಂತರಿಸಬೇಕೆಂದು ಇಲಾಖೆ ನೋಟೀಸು ಹಚ್ಚಿದೆ. ಲೋಕೋಪ ಯೋಗಿ ಇಲಾಖೆಯ ಅಧೀನದಲ್ಲಿರುವ ಸ್ಥಳದಲ್ಲಿ ಗೂಡಂಗಡಿ, ಸ್ಟಾಲ್ ಸ್ಥಾಪಿಸಿದರೆ ಮುನ್ನೆಚ್ಚರಿಕೆ ನೀಡದೆ ಮುರಿದು ತೆಗೆಯುವುದಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

You cannot copy contents of this page