ಪಿ. ಬಿಜೋಯ್ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ

ಕಾಸರಗೋಡು: ರಾಜ್ಯದ ಒಂಭತ್ತು ಜಿಲ್ಲೆಗಳ ವರಿಷ್ಠ ಪೊಲೀಸ್ ಅಧಿಕಾರಿಗಳನ್ನು ಅತ್ತಿತ್ತ ವರ್ಗಾ ಯಿಸಲಾಗಿದೆ. ಇದರಂತೆ ಈಗ ತಿರುವನಂತಪುರ ರೇಂಜ್ ಸ್ಪೆಷಲ್ ಬ್ರಾಂಚ್‌ನ ಎಸ್‌ಪಿ ಆಗಿರುವ ಬಿ. ಬಿಜೋಯ್‌ರನ್ನು ಅಲ್ಲಿಂದ ವರ್ಗಾವಣೆ ನೀಡಿ ಕಾಸರಗೋಡು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಇವರು ಶೀಘ್ರ ಕಾಸರಗೋಡಿನಲ್ಲಿ ಅಧಿಕಾರ ವಹಿಸಲಿದ್ದಾರೆ.

ಈಗಿನ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಡಾ. ವೈಭವ್ ಸಕ್ಸೇನಾರನ್ನು ಇಲ್ಲಿಂದ ಎರ್ನಾಕುಳಂ ರೂರಲ್ ಎಸ್‌ಪಿಯಾಗಿ ನೇಮಿಸಲಾಗಿದೆ.

ಅಂದು ಮಂಜೇಶ್ವರ ಎಸ್.ಐ. ಇಂದು ಜಿಲ್ಲಾ ಪೊಲೀಸ್ ಅಧಿಕಾರಿ

ಕಾಸರಗೋಡು ಜಿಲ್ಲೆಯ ವರಿಷ್ಠ ಪೊಲೀಸ್ ಅಧಿಕಾರಿಯಾಗಿ ನೇಮಕಗೊಂಡಿರುವ ಪಿ. ಬಿಜೋಯ್ ೧೯೯೬ರಲ್ಲಿ ಮಂಜೇಶ್ವರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆಗಿ ಪೊಲೀಸ್ ಸೇವೆಗೆ ಪ್ರವೇಶ ಪಡೆದಿದ್ದರು. ಆ ಬಳಿಕ ೨೦೧೦-೧೧ನೇ ವರ್ಷದಲ್ಲಿ ಅವರು ಕಾಸರಗೋಡು ಡಿವೈಎಸ್‌ಪಿ ಯಾಗಿಯೂ ಸೇವೆ ಸಲ್ಲಿಸಿದ್ದರು.

೨೦೧೫ರಲ್ಲಿ ಮುಖ್ಯಮಂತ್ರಿಯ ವರು ಚಿನ್ನದ ಪದಕ ಮತ್ತು ೨೦೧೮ರಲ್ಲಿ ರಾಷ್ಟ್ರಪತಿಯವರ ಚಿನ್ನದ ಪದಕ ಅವರಿಗೆ ಲಭಿಸಿತ್ತು. ೨೦೦೫ರಲ್ಲಿ ಕೊಸೂವೂನಲ್ಲಿ ವಿಶ್ವಸಂಸ್ಥೆಯ ಪೀಸ್ ಕೀಪಿಂಗ್ ಫೋರ್ಸ್‌ನಲ್ಲೂ ಸೇವೆ ಸಲ್ಲಿಸಿದ್ದರು. ಈ ಎಲ್ಲಾ ವಿಶಿಷ್ಟ ಸೇವೆಗಳನ್ನು ಪರಿಗಣಿಸಿ ೨೦೧೯ರಲ್ಲಿ ಅವರನ್ನು ಐಪಿಎಸ್ ನೀಡಲಾಯಿತು.

ತಿರುವನಂತಪುರ ನಿವಾಸಿಯಾಗಿ ರುವ ಇವರು ಕಾನೂನು ಮತ್ತು ಶಿಸ್ತು ಪಾಲನಾ ರಂಗ, ಭ್ರಷ್ಟಾಚಾರದ ವಿರುದ್ಧ ಸದಾ ಕಟ್ಟುನಿಟ್ಟು ಪಾಲಿಸುತ್ತಾ ಬಂದಿರುವ ಓರ್ವ ಪ್ರಾಮಾಣಿಕ ಹಾಗೂ ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿದ್ದಾರೆ.

RELATED NEWS

You cannot copy contents of this page