ಪುಡಿಗಳ್ಳರಿದ್ದಾರೆ ಜಾಗ್ರತೆ

ಕಾಸರಗೋಡು: ಕಾಸರಗೋಡಿ ನಲ್ಲಿ ದೊಡ್ಡ ಕಳ್ಳತನದ ಜೊತೆಗೆ ಈಗ ಪುಡಿಗಳ್ಳರ ಹಾವಳಿಯೂ ವ್ಯಾಪಕವಾಗಿ ನಡೆಯತೊಡಗಿದೆ.

ಕಾಸರಗೋಡು ರೈಲು ನಿಲ್ದಾಣದ ಎದುರುಗಡೆ ಕಾರ್ಯವೆಸಗುತ್ತಿರುವ ಹೋಟೆಲೊಂದರ ಕ್ಯಾಶ್ ಕೌಂಟರ್ ಲ್ಲಿ ಇರಿಸಲಾಗಿದ್ದ ಮಾಲಿಕ್ ದೀನಾರ್ ಮಸೀದಿಯ ಹರಕೆ  ಡಬ್ಬಿಯನ್ನೇ  ಪುಡಿಗಳ್ಳನೋರ್ವ ಕದ್ದು ಸಾಗಿಸಿದ್ದಾನೆ. ಈತ ಆಹಾರ ಸೇವಿಸಲು ಆ ಹೋಟೆಲ್‌ಗೆ ಬಂದಿದ್ದನು. ಆಹಾರ ಸೇವಿಸಿ  ಹಣ ನೀಡಲು ಹೋಟೆಲ್‌ನ ಕ್ಯಾಶ್ ಕೌಂಟರ್ ಬಳಿ ಬಂದಾಗ ಅಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಆತ  ಕ್ಯಾಶ್ ಕೌಂಟರನ ಮೇಲೆ ಇರಿಸಿದ್ದ ಹರಕೆ ಡಬ್ಬಿಯನ್ನೇ ಕದ್ದು ಬ್ಯಾಗಿನೊಳಗೆ ಇರಿಸಿದ ಬಳಿಕ  ಸಭ್ಯನಂತೆ ವರ್ತಿಸಿ ಸೇವಿಸಿದ ಆಹಾರದ ಹಣವನ್ನು ನೀಡಿ ಹೊರ ಹೋಗಿದ್ದಾನೆ. ಆ ಎಲ್ಲಾ ದೃಶ್ಯಗಳು ಹೋಟೆಲ್‌ನ ಸಿಸಿ ಟಿವಿಕ್ಯಾಮರಾದಲ್ಲಿ ಚಿತ್ರೀಕರಿಸಲ್ಪಟ್ಟು ಅದು  ಈಗ ವೈರಲ್ ಆಗತೊಡಗಿದೆ. ಈ ಬಗ್ಗೆ ಕಾಸರಗೋ ಡು ಪೊಲೀಸರು ಇನ್ನೊಂದೆಡೆ ತನಿಖೆ ಆರಂಭಿಸಿದ್ದಾರೆ.

ಮಳೆಗಾಲದಲ್ಲೇ ಇಂತಹ ಪುಡಿ ಗಳ್ಳರ ಹಾವಳಿ ಅತೀ ಹೆಚ್ಚಾಗಿ ನಡೆ ಯುತ್ತಿದೆ. ಸಭ್ಯ ವ್ಯಕ್ತಿಗಳಂತೆ ಬಂದು ಕಳ್ಳತನ ನಡೆಸುವವರು ಇಂತಹವರ ರೀತಿಯಾಗಿದೆ. ಆದ್ದರಿಂದ ಜನರು ಈ ಬಗ್ಗೆ ಜಾಗ್ರತೆ ವಹಿಸಬೇಕಾಗಿದೆ.

Leave a Reply

Your email address will not be published. Required fields are marked *

You cannot copy content of this page