ಪುತ್ರ, ಪತಿಯನ್ನು ಬಿಟ್ಟು ಪರಾರಿಯಾದ ಯುವತಿಗೆ ಕೊನೆಗೂ ಮನಸ್ಸು ಬದಲಾವಣೆ

ಕಾಸರಗೋಡು: ನಾಲ್ಕು ವರ್ಷದ ಪುತ್ರನನ್ನು ಹಾಗೂ ಪತಿಯನ್ನು ಉಪೇಕ್ಷಿಸಿ ತನಗಿಂತ ಎರಡು ವರ್ಷ ಚಿಕ್ಕವನಾದ ಪ್ರಿಯತಮನೊಂದಿಗೆ ಪರಾರಿಯಾದ ಯುವತಿಗೆ ಪೊಲೀಸರು ನೀಡಿದ ಉಪದೇಶದಿಂದ ಮನಸ್ಸು ಬದಲಾವಣೆಯಾಗಿದೆ. ಕೊನೆಗೆ ಯುವತಿ ಪ್ರಿಯತಮನನ್ನು ಕೈಬಿಟ್ಟು ಪತಿ ಹಾಗೂ ಮಗನ ಜೊತೆಗೆ ತೆರಳಿದ್ದಾಳೆ. ಕರಿಂದಳಂ ಚಾಮಕ್ಕಳುಯ 26ರ ಹರೆಯದ ಯುವತಿ ಪಯ್ಯನ್ನೂರು ನಿವಾಸಿಯಾದ 24ರ ಯುವಕನ ಜೊತೆ ಆದಿತ್ಯವಾರ ಪರಾರಿಯಾಗಿದ್ದಳು. ಯುವಕ ಕೇಬಲ್ ಟಿವಿ ಕಾರ್ಮಿಕನಾಗಿದ್ದಾನೆ. ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ನೀಡಿದ ದೂರಿನಂತೆ ನೀಲೇಶ್ವರ ಪೊಲೀಸರು ಕೇಸು ದಾಖಲಿಸಿದ್ದರು. ತನಿಖೆಯಂಗವಾಗಿ ಪೊಲೀಸರು ಪ್ರಿಯತಮನ ಮನೆಗೆ ತಲುಪಿದ್ದರು. ಆದರೆ ಮನೆಯಲ್ಲಿ ಇಲ್ಲ ಎಂದು ಮನೆ ಮಂದಿ ಪೊಲೀಸರಿಗೆ ತಿಳಿಸಿದ್ದಾರೆ. ಜೋಡಿಯ ಫೋನ್‌ಗಳು ಸ್ವಿಚ್‌ಆಫ್ ಆಗಿತ್ತು. ಮನೆಯಿಂದ ಲಭಿಸಿದ ಫೋನ್ ನಂಬ್ರದಲ್ಲಿ ಸಂಪರ್ಕಿಸಿದಾಗ ನಾವು ಪರಶ್ಶಿನಕಡವಿನಲ್ಲಿದ್ದೇವೆಂದು ತಿಳಿಸಿದ್ದಾರೆನ್ನಲಾಗಿದೆ. ಬಳಿಕ ಇವರನ್ನು ಪೊಲೀಸರು ಠಾಣೆಗೆ ಕರೆಸಿ ಮಾತುಕತೆ ನಡೆಸಿದರು. ಗಂಟೆಗಳ ಕಾಲ ಪೊಲೀಸರು ನೀಡಿದ ಉಪದೇಶದಿಂದ ಇಬ್ಬರ ಮನಸ್ಸು ಬದಲಾವಣೆಗೊಂಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಯುವತಿ ಪತಿ ಹಾಗೂ ಪುತ್ರನ ಜೊತೆ ತೆರಳುವುದಾಗಿ ಸ್ಪಷ್ಟಪಡಿಸಿದ್ದಾಳೆ.

Leave a Reply

Your email address will not be published. Required fields are marked *

You cannot copy content of this page