ಪುಷ್ಪಕ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಆತಂಕ ಹಳಿಗೆ ಹಾರಿದ 11 ಮಂದಿ ಮೃತ್ಯು

ಮುಂಬೈ: ಮಹಾರಾಷ್ಟ್ರದ ಜಲ್‌ಗಾವ್ ಜಿಲ್ಲೆಯಲ್ಲಿ ಕರ್ನಾಟಕ ಎಕ್ಸ್‌ಪ್ರೆಸ್ ಢಿಕ್ಕಿ ಹೊಡೆದು 11 ಮಂದಿ ಮೃತಪಟ್ಟಿದ್ದಾರೆ.  ಮುಂಬೈಗೆ ಸಂಚರಿಸುತ್ತಿದ್ದ ಪುಷ್ಪಕ್  ಎಕ್ಸ್‌ಪ್ರೆಸ್‌ನ ಪ್ರಯಾಣಿಕರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ನಿನ್ನೆ ಸಂಜೆ ೫ ಗಂಟೆಗೆ ಈ ದುರಂತ ಉಂಟಾಗಿದೆ. ಮಹೇಜಿ-ಪರ್ದಾದೆ ರೈಲ್ವೇ ನಿಲ್ದಾಣಗಳ ಮಧ್ಯೆ ಅಪಘಾತ ಸಂಭವಿಸಿದೆ. ಪುಷ್ಪಕ್ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣಿಕರು ರೈಲಿನ ಚಕ್ರಗಳಿಂದ ಹೊಗೆ ಬರುತ್ತಿರುವುದನ್ನು ಕಂಡ ಹಿನ್ನೆಲೆಯಲ್ಲಿ  ಬೆಂಕಿ ಆಕಸ್ಮಿಕ ಸಂಭವಿಸಿದೆಯೆಂದು ಪ್ರಚಾರ ಉಂಟಾಯಿತು. ಈ ಹಿನ್ನೆಲೆಯಲ್ಲಿ ಬೆದರಿದ ಪ್ರಯಾಣಿಕರು ಪಾರಾಗಲಿರುವ ಯತ್ನದ ಮಧ್ಯೆ ರೈಲು ಹಳಿಗೆ ಹಾರಿದ್ದಾರೆ.  ಇನ್ನೊಂದು ಹಳಿಯಲ್ಲಿ ಬರುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್ ಹಳಿಗೆ ಹಾರಿದವರಿಗೆ ಢಿಕ್ಕಿ ಹೊಡೆದಿದೆ. ಇವರಲ್ಲಿ ಇನ್ನೂ ೮ ಮಂದಿ ಗಂಭೀರ ಗಾಯಗೊಂಡಿ ದ್ದಾರೆನ್ನಲಾಗಿದೆ. ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ. ಇದೇ ವೇಳೆ ಪುಷ್ಪಕ್ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಉಂಟಾಗಿತ್ತೆಂಬುದು ಸುಳ್ಳು ಸುದ್ದಿಯಾಗಿದ್ದು, ಈ ಮಾಹಿತಿ ಕೇಳಿದ ೩೦ರಷ್ಟು ಪ್ರಯಾಣಿಕರು ರೈಲಿನಿಂದ ಹಾರಿದ್ದಾರೆನ್ನಲಾಗಿದೆ. ಲಕ್ನೋದಿಂದ ಮುಂಬೈಗೆ ಈ ರೈಲು ಸಂಚರಿಸುತ್ತಿತ್ತು.

Leave a Reply

Your email address will not be published. Required fields are marked *

You cannot copy content of this page