ಪೆರಡಾಲ ಸೇವಾ ಸಹಕಾರಿ ಬ್ಯಾಂಕ್: ಸಹಕಾರ ಭಾರತಿಯ 11 ಮಂದಿ ಅವಿರೋಧ ಆಯ್ಕೆ
ಬದಿಯಡ್ಕ: ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ನ ನೂತನ ಆಡಳಿತ ಮಂಡಳಿಗೆ ಸಹಕಾರ ಭಾರತಿಯ ಎಲ್ಲಾ 11 ಮಂದಿ ಅಭ್ಯರ್ಥಿಗಳು ಅವಿರೋ ಧವಾಗಿ ಆಯ್ಕೆಯಾಗಿದ್ದಾರೆ. 2024-29ರ ಅವದಿsಗೆ ಅಧ್ಯಕ್ಷರಾಗಿ ಗಣಪತಿ ಪ್ರಸಾದ ಕುಳಮರ್ವ, ಉಪಾಧ್ಯಕ್ಷರಾಗಿ ಅವಿನಾಶ್ ರೈ ಬದಿಯಡ್ಕ ಆಯ್ಕೆಯಾ ದರು. ವಿ.ಶ್ರೀಕೃಷ್ಣ ಭಟ್, ರಾಮಪ್ಪ ಮಂಜೇ ಶ್ವರ, ಶ್ಯಾಂಭಟ್ ಮಲ್ಲಡ್ಕ, ಸುಬ್ರಹ್ಮಣ್ಯ ಏನಂಕೂಡ್ಲು, ಅಜೇಯ ಖಂಡಿಗೆ, ರವಿ ನೀರ್ಚಾಲು, ವಿದ್ಯಾಶಂಕರಿ ವಾಶೆ, ರಮ್ಯಾ ದರ್ಭೆತ್ತಡ್ಕ, ಸ್ಮಿತಾ ರೈ ನೂತನ ಸದಸ್ಯರಾಗಿ ಆಯ್ಕೆಯಾದರು. ನೂತ ನವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಹಕಾರ ಭಾರತಿಯ ನೇತೃತ್ವದಲ್ಲಿ ಅಭಿ ನಂದನಾ ಸಭೆ ಬ್ಯಾಂಕ್ ಸಭಾ ಭವ£ Àದಲ್ಲಿ ಜರಗಿತು. ಬ್ಯಾಂಕ್ನ ನಿಕಟ ಪೂರ್ವ ಅಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಸಹಕಾರ ಭಾರತಿಯ ರಾಜ್ಯ ಉಪಾಧ್ಯಕ್ಷ ಐತ್ತಪ್ಪ ಮವ್ವಾರು ಅಭಿನಂದನಾ ಭಾಷಣ ಮಾಡಿದರು. ಚುನಾವಣಾ ಪ್ರಕ್ರಿಯೆಗೆ ಸಹಕಾರಿ ಇಲಾಖೆಯ ಅದಿsಕಾರಿ ಮಣಿ ಕಂಠನ್ ವ್ರ್ಧಿ}್ಣ್ಮ}್ಣÊ ¬್ಧಣ¥್ಣ್ನಬ, @È್ಣÁ್ಣವ್ಣ್ನಿ ಅಭಿನಂದಿಸಲಾಯಿತು. ಸಹಕಾರ ಭಾರತಿಯ ಜಿಲ್ಲಾ ಅಧ್ಯಕ್ಷ ಗಣೇಶ್ ಪಾರೆಕಟ್ಟ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪದ್ಮರಾಜ ಪಟ್ಟಾಜೆ, ಬೇಂಕಿನ ಕಾರ್ಯದರ್ಶಿ ಅಜಿತ ಉಪಸ್ಥಿತರಿದ್ದರು.