ಪೆರಿಯದಲ್ಲಿ ಸ್ಥಳೀಯರ ನಿದ್ದೆಗೆಡಿಸುತ್ತಿರುವ ಚಿರತೆ: ನಿನ್ನೆ ರಾತ್ರಿ ಪುಲಿಕ್ಕಾಲ್, ಏಚಿಲಡ್ಕದಲ್ಲೂ  ಪ್ರತ್ಯಕ್ಷ

ಕಾಸರಗೋಡು: ಪೆರಿಯ, ಪುಳಿ ಕ್ಕಾಲ್‌ನಲ್ಲಿ ಚಿರತೆಯ ಭೀತಿ ಕೊನೆಗೊ ಳ್ಳುವುದಿಲ್ಲ. ನಿನ್ನೆ ರಾತ್ರಿ ಎರಡು ಕಡೆಗಳಲ್ಲಿ ಚಿರತೆ ಪ್ರತ್ಯಕ್ಷಗೊಂಡ ಮಾಹಿತಿ ತಿಳಿದು ಅರಣ್ಯ ಇಲಾಖೆ ಅಧಿಕಾರಗಳು ಸ್ಥಳಕ್ಕೆ ತಲುಪಿ ತಪಾಸಣೆ ನಡೆಸಿದರು.

 ಪುಳಿಕ್ಕಾಲ್‌ನಲ್ಲಿ ರಾತ್ರಿ ೯.೩೦ರ ವೇಳೆ ಚಿರತೆ ಕಂಡುಬಂದಿದೆ. ಸ್ಥಳೀ ಯರು ಬೊಬ್ಬೆ ಹೊಡೆದಾಗ ಚಿರತೆ ಅರಙ್ಙನಡ್ಕಂ ಭಾಗಕ್ಕೆ ಪರಾರಿಯಾಗಿರುವು ದಾಗಿ ಶಂಕಿಸಲಾಗಿದೆ. ಈ ಬಗ್ಗೆ ತಿಳಿದು ಹಲವಾರು ಮಂದಿ  ಸ್ಥಳಕ್ಕೆ ತಲುಪಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ. ಪುಳಿಕ್ಕಾಲ್‌ನಲ್ಲಿ ಚಿರತೆಯನ್ನು ಕಂಡ ಬೆನ್ನಲ್ಲೇ ಕಲ್ಯೋಟ್, ಏಚಿಲಡ್ಕದಲ್ಲೂ ಚಿರತೆ ಕಂಡುಬಂದಿರುವುದಾಗಿ ಹೇಳಲಾ ಗುತ್ತಿದೆ. ಅಚ್ಯುತನ್ ಎಂಬವರ ಮನೆಯ ಸಮೀಪದಲ್ಲಿ ಚಿರತೆ ನಡೆದುಕೊಂಡು ಹೋಗುತ್ತಿರುವುದು ಕಂಡಿರುವುದಾಗಿ  ಸ್ಥಳೀಯರು ತಿಳಿಸುತ್ತಾರೆ. ನಿನ್ನೆ ಸಂಜೆ ಕಲ್ಯೋಟ್, ಕೂರಾಂಗರದಲ್ಲೂ ಚಿರತೆ ಪ್ರತ್ಯಕ್ಷಗೊಂಡಿರುವುದಾಗಿ ಪ್ರಚಾರವಿದೆ.

RELATED NEWS

You cannot copy contents of this page